2.09 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ

Census forms distributed to 2.09 lakh voters.
Census forms distributed to 2.09 lakh voters.
Published on

ಶಿಡ್ಲಟ್ಟ:

ಶಿಡ್ಲಟ್ಟ ವಿಧಾನಸಭಾ ೇತ್ರದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಸ್​.ಎಸ್​.ಅಬೀದ್​ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂ.30ರಿಂದ ಆ.17ರವರೆಗೆ ಬಿಎಲ್​ಒಗಳು, ಸೂಪರ್​ ವೈಸರ್​ಗಳು ಹಾಗೂ ಇತರೆ ಅಧಿಕಾರಿಗಳು ಮನೆ, ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದರು. ೇತ್ರದ ಒಟ್ಟು 2,09,752 ಮತದಾರರಿಗೆ ಶೇ.100ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, ಈ ಪೈಕಿ 1,84,975 ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ ಎಂದು ತಿಳಿಸಿದರು.

ಅಸಂಗತತೆಗಳ ಸಂಖ್ಯೆ ಇಳಿಕೆ

ಮತದಾರರ ಪಟ್ಟಿಯಲ್ಲಿ ಹೆಸರುಗಳ ವ್ಯತ್ಯಾಸ, ತಂದೆ, ತಾಯಿ ಮತ್ತು ಮಕ್ಕಳ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವಂತಹ ಅಸಂಗತತೆಗಳನ್ನೂ ಪರಿಶೀಲಿಸಲಾಗಿದೆ. ಈ ಹಿಂದೆ ಗುರುತಿಸಲಾಗಿದ್ದ ಸುಮಾರು 35 ಸಾವಿರ ಅಸಂಗತತೆಗಳನ್ನು ದಾಖಲೆಗಳ ಪರಿಶೀಲನೆಯ ಮೂಲಕ 9,234ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ 2,842 ನೋ ಮ್ಯಾಪಿಂಗ್​ ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಕಳುಹಿಸಲಾಗುವುದು. ಬಳಿಕ ವಿಚಾರಣೆ ನಡೆಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಬೀದ್​ ಹೇಳಿದರು.

ಆ.17ರ ನಂತರ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗಿದೆ. ಅಲ್ಲದೆ, ಗ್ರಾಪಂಗಳು, ವಾರ್ಡ್​ ಕಚೇರಿಗಳು, ತಾಲೂಕು ಕಚೇರಿ ಹಾಗೂ ಮತಗಟ್ಟೆಗಳಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕರಡು ಪಟ್ಟಿಯಲ್ಲಿನ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆೇಪಣೆಗಳಿಗೆ ಸೆ.23ರವರೆಗೆ ಅವಕಾಶವಿದೆ. ಸ್ವೀಕರಿಸುವ ಹಕ್ಕು, ಆೇಪಣೆಗಳ ಇತ್ಯರ್ಥಕ್ಕೆ ವಿಚಾರಣೆ ಪ್ರಕ್ರಿಯೆಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಗೈರುಹಾಜರು, ಕಾಯಂ ವಿಳಾಸ ಬದಲಾವಣೆ, ಮೃತ ಹಾಗೂ ನಕಲಿ ಮತದಾರರನ್ನು ಎಎಸ್​ಡಿ ವಿಭಾಗದಲ್ಲಿ ಗುರುತಿಸುವ ಪ್ರಕ್ರಿಯೆಯನ್ನೂ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಹೇಳಿದರು.
ಈ ಪ್ರಕ್ರಿಯೆಯಲ್ಲಿ 5,582 ಮೃತ ಮತದಾರರನ್ನು ಗುರುತಿಸಲಾಗಿದೆ. 2,250ಕ್ಕೂ ಹೆಚ್ಚು ನಕಲಿ ಹೆಸರುಗಳು ಹಾಗೂ ಬಿಎಲ್​ಒಗಳು ಐದರಿಂದ ಎಂಟು ಬಾರಿ ಭೇಟಿ ನೀಡಿದರೂ ಪತ್ತೆಯಾಗದ 3,189 ಕಾಯಂ ಗೈರುಹಾಜರಿ ಅಥವಾ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದೆ. ಒಟ್ಟಾರೆ ೇತ್ರದಲ್ಲಿ ಶೇ.11.81ರಷ್ಟು ಮತದಾರರನ್ನು ಎಎಸ್​ಡಿ ವಿಭಾಗದಲ್ಲಿ ಗುರುತಿಸಲಾಗಿದೆ ಎಂದರು.
ಆದರೆ, ಇದು ಅಂತಿಮ ಮತದಾರರ ಪಟ್ಟಿಯಲ್ಲ, ಕರಡು ಪಟ್ಟಿ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಸಂಬಂಧಪಟ್ಟವರಿಗೆ ನೋಟಿಸ್​ ನೀಡಿ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net