ಕಾಂಗ್ರೆಸ್ ಅಭಿವೃದ್ಧಿ ಸಹಿಸದ ವಿರೋಧ ಪಕ್ಷದವರು ಹಣವೆಲ್ಲ ಗ್ಯಾರಂಟಿಗಳಿಗೆ ರ್ಖಚಾಗುತ್ತಿದ್ದು, ರಾಜ್ಯದಲ್ಲಿ ಪ್ರಗತಿಯೇ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈಗ ಅವರ ಆರೋಪಗಳಿಗೆ ಅಭಿವೃದ್ಧಿಯೇ ಉತ್ತರವಾಗಿದೆ. ನರಸಾಪುರದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ನೂತನ ಆಸ್ಪತ್ರೆ, 7 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆ, 4.50 ಕೋಟಿ ರೂ. ವೆಚ್ಚದಲ್ಲಿ ಕುರ್ಕಿ ಕೆರೆ ಪ್ರಗತಿ, 1 ಕೋಟಿ ರೂ. ವೆಚ್ಚದಲ್ಲಿ ಕುರ್ಕಿಯಲ್ಲಿ ಸಿಸಿ ರಸ್ತೆ, ಖಾಜಿ ಕಲ್ಲಹಳ್ಳಿಯಿಂದ ದೊಡ್ಡಅಯ್ಯೂರು ವರೆಗೆ 5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.