ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಸೋಮವಾರ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ವರ್ಧಂತ್ಯುತ್ಸವ ನಿಮಿತ್ತ ವಿಶೇಷ ಪೂಜೆ ನೆರವೇರಿತು. ಪ್ರಿಯಾಂಕ್ ಪೂಜಾರಿ, ಪ್ರಖ್ಯಾತ ಪೂಜಾರಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ದತ್ತಾತ್ರೇಯ ಮಹಾರಾಜರಿಗೆ ವಿಶೇಷ ಪೂಜೆ
ಅರ್ಚಕರಿಂದ ಮೊಳಗಿದ ಮಂತ್ರೂಷ
ಅಫಜಲಪುರ: ದೇವಲಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ಮಹಾರಾಜರ ನಿರ್ಗುಣ ಮಠದಲ್ಲಿ ಸೋಮವಾರ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ವರ್ಧಂತಿ ಮಹೋತ್ಸವದ ನಿಮಿತ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿದವು.
ಶ್ರೀ ದತ್ತ ಮಹಾರಾಜರ ಮೂರ್ತಿಗೆ ಅಲಂಕಾರ, ಕಾಕಡಾರತಿ ಹಾಗೂ ನಿರ್ಗುಣ ಪಾದುಕೆಗಳಿಗೆ ಅಷ್ಟಗಂಧ, ಕೇಸರ, ಕಸ್ತೂರಿ, ಸುಗಂಧ ದ್ರವ್ಯ ಲೇಪನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. 10ಕ್ಕೆ ಗರ್ಭಗುಡಿ ಪ್ರಾಂಗಣದಲ್ಲಿ ಜಗದ್ಗುರುಗಳ ಭಾವಚಿತ್ರವನ್ನು ಸಿಂಹಾಸನದ ಮೇಲಿರಿಸಿ, ವಿಶೇಷ ಫಲ&ಪುಷ್ಪಗಳಿಂದ ಸಿಂಗರಿಸಲಾಯಿತು. ಅರ್ಚಕರಿಂದ ವೇದೂಷ, ಮಂತ್ರಪಠಣ ಹಾಗೂ ಭಜನಾ ಕಾರ್ಯಕ್ರಮ ನೆರವೇರಿದವು.
ನಿರ್ಗುಣ ಮಠದ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಪೂಜಾರಿ ಮಾತನಾಡಿ, ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಭಗವಂತನ ಪ್ರತಿರೂಪವಾಗಿ ಸನಾತನ ಧರ್ಮ, ಆಧ್ಯಾತ್ಮಿಕತೆ ಹಾಗೂ ಭಾರತೀಯ ಸಂಸತಿಯ ಸಂರಣೆಗೆ ನೀಡುತ್ತಿರುವ ಮಾರ್ಗದರ್ಶನ ಅಪಾರವಾದುದು ಎಂದರು.