ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸಾಧನೆ ಮಾಡಿರುವುದು ಜನರಲ್ಲಿ ಬದಲಾವಣೆಯ ಆಸೆ ತೋರಿಸುತ್ತದೆ. ಇದು ಅಭಿವೃದ್ಧಿ ಹಾಗೂ ಸುಶಾಸನದ ಮೇಲೆ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಕಸಬಾ ಘಟಕದ ದಯಾನಂದ, ಹೊಳವನಹಳ್ಳಿ ಘಟಕ ಚೇತನ್ ಆರಾಧ್ಯ, ಮಹಿಳಾ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾಮಣಿ, ಮುಖಂಡರಾದ ರೂಪಾ, ಮಮತಾ ದಿವಾಕರ್, ಅರುಣ್ ಕುಮಾರ್ ಇದ್ದರು.