ಮೊಹರಂ ಹಬ್ಬ ಸೌಹಾರ್ದಯುತ ಆಚರಿಸಿ

 ಪಿಎಸ್​ಐ ಮಹೇಂದ್ರಕುಮಾರ
ಪಿಎಸ್​ಐ ಮಹೇಂದ್ರಕುಮಾರ
Published on

ಪ್ರಮುಖ ಮುಖ್ಯಾಂಶಗಳು

  • ಮನ್ನಾಎಖೇಳಿ ಪಿಎಸ್​ಐ ಮಹೇಂದ್ರಕುಮಾರ ಮನವಿ
ಚಿಟಗುಪ್ಪ: ಮೊಹರಂ ಹಬ್ಬ ಹಿಂದೂ&ಮುಸ್ಲಿಂ ಸಮುದಾಯಗಳ ಭಾವೈಕ್ಯ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಎಲ್ಲರೂ ಶಾಂತಿ, ಸಹೋದರತ್ವ ಹಾಗೂ ಪರಸ್ಪರ ಸಹಕಾರದೊಂದಿಗೆ ಆಚರಿಸಬೇಕು ಎಂದು ಪಿಎಸ್​ಐ ಮಹೇಂದ್ರಕುಮಾರ ಹೇಳಿದರು.
ಮೊಹರಂ ಪ್ರಯುಕ್ತ ಮನ್ನಾಎಖೇಳಿ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಈ ಭಾಗದಲ್ಲಿ ಮೊಹರಂ ಹಬ್ಬವನ್ನು ಎಲ್ಲ ಸಮುದಾಯದ ಜನರು ಸೌಹಾರ್ದಯುತವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿಯೂ ಯಾವುದೇ ಅಹಿತಕರ ಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಬೇಕು. ಅಗತ್ಯವಿರುವ ಎಲ್ಲ ಭದ್ರತಾ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಜಾಗೃತಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಎಎಸ್​ಐಗಳಾದ ಶಂಕರ ಕುಲಕರ್ಣಿ, ದಯಾಕರ ಸ್ವಾಮಿ, ಮಾರುತಿ ರಡ್ಡಿ, ಪ್ರಮುಖರಾದ ಯೂಸುಫ್​ ಅಲಿ ಜಮಾದಾರ್​, ಸಯ್ಯದ್​ ಖೈರೋದ್ದೀನ್​, ಕುಪೇಂದ್ರ ಗಣಗೌಂಡ, ಶಿವು ಮಂಗಲಗಿಕರ, ಅಸದ್​ ಪಟೇಲ್​ ಶಮತಾಬಾದ್​ ಇತರರಿದ್ದರು.
ಚಿಟಗುಪ್ಪ: ಹಬ್ಬ&ಹರಿದಿನಗಳು ನಮ್ಮ ಸಂಸತಿ, ಪರಂಪರೆ ಮತ್ತು ಸಾಮರಸ್ಯದ ಪ್ರತಿಕಗಳಾಗಿದ್ದು, ಎಲ್ಲ ಸಮುದಾಯದವರು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಿಪಿಐ ರವೀಂದ್ರನಾಥ ಹೇಳಿದರು.
ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಮೊಹರಂ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಶಾಂತಿಯುತವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಸಾರ್ವಜನಿಕರು ಹಾಗೂ ಮುಖಂಡರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಿಎಸ್​ಐ ಬಸವಲಿಂಗ ಮಾತನಾಡಿ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಿಂದ ದೂರವಿದ್ದು, ಪರಸ್ಪರ ಗೌರವ ಮತ್ತು ಸಹೋದರತ್ವದ ಭಾವನೆಯೊಂದಿಗೆ ಹಬ್ಬವನ್ನು ಆಚರಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net