ಎಲ್ಲಾ ಕಚೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ

ಮುದ್ದೇಬಿಹಾಳ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯ  ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ, ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ, ಕ್ರೈಂ ಪಿಎಸ್‌ಐ ಆರ್.ಎಸ್. ಬಂಗಿ, ಹೆಸ್ಕಾಂ ಅಧಿಕಾರಿ ಆರ್.ಎಂ. ಹಾದಿಮನಿ ವೈ.ಎಚ್. ವಿಜಯಕರ್, ಶ್ರೀಕಾಂತ್ ಚಲವಾದಿ, ರೇವಣ್ಣಪ್ಪ ಅಜಮನಿ ಮತ್ತಿತರರಿದ್ದರು.
ಮುದ್ದೇಬಿಹಾಳ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ, ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ, ಕ್ರೈಂ ಪಿಎಸ್‌ಐ ಆರ್.ಎಸ್. ಬಂಗಿ, ಹೆಸ್ಕಾಂ ಅಧಿಕಾರಿ ಆರ್.ಎಂ. ಹಾದಿಮನಿ ವೈ.ಎಚ್. ವಿಜಯಕರ್, ಶ್ರೀಕಾಂತ್ ಚಲವಾದಿ, ರೇವಣ್ಣಪ್ಪ ಅಜಮನಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೀರ್ತಿ ಚಾಲಕ ಸೂಚನೆ
  • ತಾ.ಪಂ. ಸಭಾಭವನದಲ್ಲಿ ಪೂರ್ವಭಾವಿ ಸಭೆ
ಮುದ್ದೇಬಿಹಾಳ: ತಾಲೂಕಿನ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಗ್ರಾಮ ಪಂಚಾಯತಿ, ಶಾಲಾ-ಕಾಲೇಜ್ ಹಾಗೂ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಏ.14ರಂದು ಅಂಬೇಡ್ಕರ್ ಜಯಂತಿ ಆಚರಿಸಬೇಕು. ಈ ಕುರಿತು ಆಯಾ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಕೀರ್ತಿ ಚಾಲಕ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜೃಂಭಣೆಯ ಮೆರವಣಿಗೆ: ಜಯಂತ್ಯುತ್ಸವ ಅಂಗವಾಗಿ ಬೆಳಗ್ಗೆ 7:00 ಗಂಟೆಗೆ ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ನೇತಾಜಿ ನಗರದಿಂದ ಹೊರಡುವ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆಯು ದ್ಯಾಮವ್ವನ ಗುಡಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್‌ವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಡೊಳ್ಳು, ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಪುರಸಭೆ ವತಿಯಿಂದ ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಉಚಿತ ಆರೋಗ್ಯ ಶಿಬಿರ: ಸಾಮಾಜಿಕ ಕಳಕಳಿಯೊಂದಿಗೆ ಅನುಗ್ರಹ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಚಿಕಿತ್ಸೆ, ಹೃದಯದ ತಪಾಸಣೆ, ರಕ್ತ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮುಖಂಡ ಸಿ.ಜಿ. ವಿಜಯಕರ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸಂತಿ ಮಠ ಮಾತನಾಡಿ, ಅಂಬೇಡ್ಕರ್ ಜಯಂತಿ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ದಲಿತ ಮುಖಂಡ ವೈ.ಎಚ್. ವಿಜಯಕರ್ ಮಾತನಾಡಿ, ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿಯನ್ನು ಜಾತಿ-ಧರ್ಮದ ಭೇದವಿಲ್ಲದೆ ಸರ್ವರೂ ಸೇರಿ ಸಂಭ್ರಮದಿಂದ ಆಚರಿಸೋಣ ಎಂದರು.
ಮುಖಂಡರಾದ ಹರೀಶ್ ನಾಟಿಕಾರ, ಪ್ರಶಾಂತ್ ಕಾಳೆ ಮಾತನಾಡಿ, ಮೆರವಣಿಗೆಯಲ್ಲಿ ಯಾವುದೇ ಲೋಪವಾಗದಂತೆ ಇಲಾಖೆಗಳು ಸ್ಪಂದಿಸಬೇಕು ಮತ್ತು ಪಟ್ಟಣದ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ತಾಪಂ ಸಹಾಯಕ ನಿರ್ದೇಶಕ (ಪಂ ರಾಜ್ಯ) ಮಲ್ಲಿಕಾರ್ಜುನ ಕೋರಿ, ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ, ಕ್ರೈಂ ಪಿಎಸ್‌ಐ ಆರ್.ಎಸ್. ಬಂಗಿ, ಹೆಸ್ಕಾಂ ಅಧಿಕಾರಿ ಆರ್.ಎಂ. ಹಾದಿಮನಿ, ದಲಿತ ಮುಖಂಡರಾದ ಶ್ರೀಕಾಂತ್ ಚಲವಾದಿ, ರೇವಣ್ಣಪ್ಪ ಅಜಮನಿ, ಶಿವಪುತ್ರ ಅಜಮನಿ, ಬಲಭೀಮ ನಾಯಕ, ಭಗವಂತನ ಕಾಬಾಡೆ, ಅಶೋಕ ಪಾದಗಟ್ಟಿ, ನಾಗೇಶ ಭಂಜತ್ರಿ, ಶಿವು ಶಿವಪುರ, ತಿಪ್ಪಣ್ಣ ದೊಡ್ಡಮನಿ, ಬಾಲಚಂದ್ರ ಹುಲ್ಲೂರ, ಮಂಜುನಾಥಸ್ವಾಮಿ ಕುಂದರಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net