KRSನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬಿಜೆಪಿಗೆ ಮಾಹಿತಿ ಕೊರತೆ ಇದೆ: ರಾಮಲಿಂಗಾ ರೆಡ್ಡಿ..Ramalinga Reddy
Cauvery water to tamilnadu Karnataka Minister Ramalinga Reddy slams on bjp
Published on:
Copied
Follow Us
ಬೆಂಗಳೂರು: ಕಾವೇರಿ ನೀರನ್ನು ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದೆ ಎನ್ನುವ ಆರೋಪವನ್ನು ವಿಪಕ್ಷ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮಾತನಾಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ಬಿಡಲಾಗಿದೆ. ತಮಿಳುನಾಡಿಗೆ ನೀರನ್ನು ಹರಿಸಿಲ್ಲ. ವಿಪಕ್ಷಗಳು ಆಧಾರ ರಹಿತ ಆರೋಪ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಕೆಆರ್ಎಸ್ನಿಂದ ನೀರು ಹರಿಸಿದ ವಿಚಾರದ ಬಗ್ಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ.
ಮಳೆ ಕಡಿಮೆ ಇದೆ
ಕಳೆದ 150 ವರ್ಷದ ಇತಿಹಾಸದಲ್ಲೇ ಈ ಬಾರಿ ಜೂನ್ನಲ್ಲಿ ಮಳೆ ಕಡಿಮೆಯಾಗಿದೆ. ಹಿಂದಿನ ವರ್ಷ ಕರೆ, ಕುಂಟೆ, ಹೊಳೆ, ಡ್ಯಾಂಗಳು ಬಹುತೇಖ ಭರ್ತಿಯಾಗಿದ್ದವು. ಆದೆ, ಈ ವರ್ಷ ಪರಿಸ್ಥಿತಿ ಹಿಂದೆಯಿದ್ದ ರೀತಿಯಿಲ್ಲ. ಮಳೆ ಲಭ್ಯತೆ ಕಡಿಮೆ ಇದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ.
ಬಿಜೆಪಿ ಬಗ್ಗೆ ಹೇಳಿದ್ದಿಷ್ಟು
ನಾನು ಬಿಜೆಪಿಯವರ ಟ್ವೀಟ್ ನೋಡಿದ್ದೇನೆ. ಕೆಆರ್ಎಸ್ಗೆ ನೀರು ಬಿಟ್ಟಿದ್ದೇವೆ ಎಂದು ವಿಪಕ್ಷ ನಾಯಕರು ಮಾತನಾಡಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದೆ. BWSSB ಯವರು ಪತ್ರ ಬರೆದಿದ್ದರು. ಬೆಂಗಳೂರಿಗಾಗಿ ಮಾತ್ರ ನೀರು ಬಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬಿಳಿಗುಂಡ್ಲು ಹೋಗಿ ಮಾಹಿತಿ ತಗೊಳ್ಳಿ
ಬಿಳಿಗುಂಡ್ಲು ಬಳಿ ನೀರಿನ ಹರಿವನ್ನು ಅಳೆಯುವ ಅಧಿಕೃತ ಮೆಜರ್ ಮೆಂಟ್ ಇದೆ. ಬಿಜೆಪಿ ನಾಯಕರು ಅಲ್ಲಿಗೆ ತೆರಳಿ ಮಾಹಿತಿ ಪಡೆದುಕೊಳ್ಳಲಿ. ಆಗ ಎಷ್ಟು ನೀರಿನ ಹರಿವು ಇದೆ. ನೀರು ಬಿಡಲಾಗಿದೆಯೋ ಅಥವಾ ಇಲ್ಲಬೋ ಎಂಬ ಮಾಹಿತಿ ಸಿಗಲಿದೆ.ನಾವು ತಮಿಳುನಾಡಿಗೆ ನೀರು ಬಿಟ್ಟಿಲ್ಲ
ಕೆಆರ್ಎಸ್ನಲ್ಲಿ ನೀರು ಇರುವ ಪ್ರಮಾಣ ನೋಡಿ ತಮಿಳುನಾಡಿಗೆ ನೀರು ಬಿಡಬೇಕೋ ಬೇಡ್ವೋ ತೀರ್ಮಾನಿಸ್ತಾರೆ. ಬಿಟ್ಟರೆ ಉಂಟಾಗುವ ಸಮಸ್ಯೆಗಳೇನು ಎಂದೆಲ್ಲ ಪರಿಶೀಲನೆ ನಡೆಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು, (ಏಜೆನ್ಸೀಸ್)