ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್, ವಿನಯ್ ಕಾರ್ತಿಕ್ ಪ್ರಕಾಶ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ. ಮೋಹನ್ ಮತ್ತು ಬಿ.ಎಸ್. ಶಿವಣ್ಣ ಅವರನ್ನು ಪರಿಷತ್ತಿನ ಕಣಕ್ಕೆ ಇಳಿಸಿದೆ. 132 ಶಾಸಕರ ಬಲದಿಂದ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ. 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮತಗಳ ಕೊರತೆ ಇದ್ದು, 2 ಮತ್ತು 3ನೇ ಪ್ರಶಸ್ಯ ಮತಗಳ ಲೆಕ್ಕಾಚಾರದಲ್ಲಿ ಗೆಲ್ಲಿಸಿಕೊಳ್ಳಲು ನಿರ್ಧಾರ ಮಾಡಿದೆ.