

ಗೋಣಿಕೊಪ್ಪಲು:
ಕುಶಾಲನಗರ ಫಾತಿಮಾ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆತಿಥೇಯ ಫಾತಿಮಾ ಪಿಯು ಕಾಲೇಜು ತಂಡವನ್ನು 7-2 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ ಚಾಂಪಿಯನ್ ಶಿಪ್ ಕಿರೀಟ ಮುಡಿಗೇರಿಸಿಕೊಂಡಿತು.