ಮುಖಕ್ಕೆ ಬೂದಿ ಎರಚಿ ನಗದು, ಚಿನ್ನಾಭರಣ ಕಳ್ಳತನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ಪೂಜೆಯ ನೆಪದಲ್ಲಿ ಮನೆಗೆ ಬಂದ ಸ್ವಾಮೀಜಿ ಮುಖಕ್ಕೆ ಬೂದಿ ಎರಚಿ ಲಕ್ಷಾಂತರ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಮಲ್ಲಸಂದ್ರ ನಿವಾಸಿ ಗೀತಾ ಅವರು ನೀಡಿದ ದೂರಿನ ಮೇರೆಗೆ ಯಲಹಂಕದ ಶಿವಕಾಳಿ ಎಂಬಾತನ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.14ರಂದು ಗೀತಾ ಅವರ ಮನೆಯಲ್ಲಿ ಪೂಜೆ ಮಾಡಲು ಶಿವಕಾಳಿ ಎಂಬಾತ ಸ್ವಾಮಿ ವೇಷದಲ್ಲಿ ಬಂದಿದ್ದ. ಪೂಜೆಗೆ ಕುಂಬಳಕಾಯಿ, ನಿಂಬೆ ಹಣ್ಣು ಇತ್ಯಾದಿ ತಂದಿದ್ದ. ಆಗ ಪೂಜೆಗೆ ಮನೆಯಲ್ಲಿನ ಬಂಗಾರ ಹಾಗೂ ನಗದು ತಂದು ಇಡುವಂತೆ ಸೂಚಿಸಿದ್ದ.
ಸ್ವಾಮಿಯ ಸೂಚನೆಯಂತೆ ದೂರುದಾರರು, 43 ಗ್ರಾಂ. ಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದನ್ನು ತಂದು ಇಟ್ಟಿದ್ದರು. ಈ ವೇಳೆ ಮಹಿಳೆಯನ್ನು ಕರೆದು ಆಶೀರ್ವಾದ ಮಾಡುವ ನೆಪದಲ್ಲಿ ಬೂದಿ ಎರಚಿ ಬೆನ್ನಿಗೆ ಹೊಡೆದಿದ್ದಾನೆ. ಆಗ ಅವರು ಮೂರ್ಚೆ ತಪ್ಪಿ ಬಿದ್ದಿದ್ದಾರೆ. ಆಗ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ. ಒಂದು ಗಂಟಿನಲ್ಲಿ ಹುಣಸೆ ಹಣ್ಣು ಕಟ್ಟಿಟ್ಟು ಪರಾರಿಯಾಗಿದ್ದಾನೆ.
ಎಚ್ಚರವಾದ ಬಳಿಕ ಮನೆ ಹೊರಗೆ ಹುಡುಕಿದ್ದಾರೆ. ದೂರದಲ್ಲಿ ಸ್ವಾಮಿಜಿ ನಡೆದು ಕೊಂಡು ಹೊರಟಿದ್ದ ಆಗ ನಗದು ಚಿನ್ನಾಭರಣ ಕೇಳಿದಾಗ ಮನೆಯಲ್ಲಿ ಗಂಟು ಕಟ್ಟಿ ಇಟ್ಟಿದ್ದೇನೆ. 2 ದಿನ ಬಿಟ್ಟು ಅದನ್ನು ತೆರೆಯಬೇಕು. ಈಗಲೇ ತೆರೆದರೆ ರಕ್ತ ಕಕ್ಕಿ ಸಾಯುತ್ತಿರಿ ಎಂದು ಹೆದರಿಸಿದ್ದಾನೆ.

ಗಂಟಿನಲ್ಲಿತ್ತು ಹುಣಸೆಹಣ್ಣು:

ಸ್ವಾಮಿಯ ಸೂಚನೆಯಂತೆ 2 ದಿನಗಳ ಬಳಿಕ ಗಂಟು ತೆರೆದು ನೋಡಿದಾಗ ಅದರಲ್ಲಿ ಬರೊಬ್ಬರಿ ಹುಣಸೆಹಣ್ಣು ತುಂಬಿದ್ದ. ಇದನ್ನು ನೋಡಿ ಕಂಗಾಲಾದ ಮಹಿಳೆ ಕೂಡಲೇ ಸ್ವಾಮಿಗೆ ಕರೆ ಮಾಡಿದ್ದಾರೆ ಆಗ ಆತನ ಪೋನ್ ಸ್ವಿಚ್ ಆ್ ಬಂದಿದೆ. ಆಗ ತಾನು ಮೋಸ ಹೋಗಿದ್ದೇನೆಂದು ಅರಿತು ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net