ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ಒಂದೇ ಗ್ರಾಮದ ನಾಲ್ವರ ದುರ್ಮರಣ

killed
killed
Published on
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ ನಾಲ್ವರು ಮಂಗಳವಾರ ದುರ್ಮರಣ ಹೊಂದಿರುವ ಧಾರುಣ ಘಟನೆ ಸಾಸಲು ಹಳ್ಳದ ಬಳಿ ಸಂಭವಿಸಿದೆ.
ಚಿಕ್ಕಜಾಜೂರು ಸಮೀಪದ ಕಲ್ಲವ್ವನಾಗತಿಹಳ್ಳಿ ಗ್ರಾಮದ ಗಿರಿರಾಜ್ (46), ಕಿರಣ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಿಂದಾಗಿ ತೀವ್ರ ಗಾಯಗೊಂಡ ಇದೇ ಗ್ರಾಮದ ಆರು ಮಂದಿಯ ಪೈಕಿ ಅರುಣ್ (32), ಹನುಮಂತ (42) ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ನಾಲ್ವರನ್ನು ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲ ತೋಟಗಳಲ್ಲಿ ಅಡಕೆ ಕೊಯ್ಲು ಮಾಡುವ  ಕೂಲಿ ಕಾರ್ಮಿಕ ಕಾಯಕದಿಂದಲೇ ಜೀವನ ಸಾಗಿಸುತ್ತಿದ್ದರು ಎಂಬ ಮಾಹಿತಿ ಇದೆ. 
ಘಟನೆ ಹಿನ್ನೆಲೆ: ಗಿರಿರಾಜ್ ಎಂಬುವರು ಈ ವೃತ್ತಿಯಲ್ಲಿ ಪ್ರಮುಖರಾಗಿದ್ದು, ಕಲ್ಲವ್ವ ನಾಗತಿಹಳ್ಳಿ ಯಿಂದ ನಿತ್ಯ ಏಳೆಂಟು ಕೂಲಿ ಕಾರ್ಮಿಕರನ್ನು ಬೇಡಿಕೆ ಅನುಸಾರ ಹೊರ ಊರುಗಳಿಗೆ ಸಂಚರಿಸುತ್ತಿದ್ದರು. ಅದರಲ್ಲಿ ದಾವಣಗೆರೆಯೇ ಹೆಚ್ಚು ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಂದಿನಂತೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ತೋಟದಲ್ಲಿ ಅಡಕೆ ಕೊಯ್ಲು ಮಾಡಿಕೊಂಡು ಕಲ್ಲವ್ವ ನಾಗತಿಹಳ್ಳಿಗೆ ಹಿಂದಿರುಗುವ ವೇಳೆ ಸಂಜೆ 5.45ರ ಸುಮಾರಿಗೆ ಸಾಸಲು ಹಳ್ಳ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ ಹೊಡೆದ ರಭಸಕ್ಕೆ 
ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟು, ವಾಹನ ಬಹುತೇಕ ನಜ್ಜುಗುಜ್ಜಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net