ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಮಹಿಳೆ: ಕಾರು ಹರಿದು ವಿದ್ಯುತ್ ಗುತ್ತಿಗೆದಾರ ದುರಂತ ಸಾವು! Car Accident

ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಮಹಿಳೆ: ಕಾರು ಹರಿದು ವಿದ್ಯುತ್ ಗುತ್ತಿಗೆದಾರ ದುರಂತ ಸಾವು! Car Accident
ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಮಹಿಳೆ: ಕಾರು ಹರಿದು ವಿದ್ಯುತ್ ಗುತ್ತಿಗೆದಾರ ದುರಂತ ಸಾವು! Car Accident
Published on

ಪ್ರಮುಖ ಮುಖ್ಯಾಂಶಗಳು

  • ಕಾರು ನಿಲ್ಲಿಸುವಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಮಹಿಳೆ
  • ಕಾರು ಹರಿದು ವಿದ್ಯುತ್ ಗುತ್ತಿಗೆದಾರ ಅಜ್ಜಪ್ಪ ಶಿವಪ್ಪ ಕಳಸಣ್ಣನವರ ದುರಂತ ಸಾವು
  • ಹಾವೇರಿಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದ ಘಟನೆ
ರಾಣೆಬೆನ್ನೂರು: ಮಹಿಳೆಯೊಬ್ಬರು ಕಾರು ನಿಲ್ಲಿಸುವಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮ ಎದುರಿಗಿದ್ದ ವ್ಯಕ್ತಿ ಮೇಲೆ ಕಾರು ಹರಿದು ( Car Accident ) ದುರ್ಮರಣ ಹೊಂದಿದ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಅಜ್ಜಪ್ಪ ಶಿವಪ್ಪ ಕಳಸಣ್ಣನವರ (40) ಮೃತ ದುರ್ದೈವಿ. ಬೆಂಗಳೂರಿನ ಸುಜಾತಾ ಕೆ.ಎಂ. ಕಾರು ಹಾಯಿಸಿದ ಮಹಿಳೆ.
ಅಜ್ಜಪ್ಪ ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದ. ಸುಜಾತಾಳ ಜಮೀನಿನಲ್ಲಿ ವಿದ್ಯುತ್ ಪರಿವರ್ತಕದ ಕೆಲಸವಿದ್ದ ಕಾರಣ ಅವರ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ ಕಾರಿನಲ್ಲಿ ಬಂದ ಸುಜಾತಾ ಅಜ್ಜಪ್ಪನನ್ನು ಮಾತನಾಡಿಸುವ ಸಲುವಾಗಿ ಕಾರು ನಿಲ್ಲಿಸಲು ಮುಂದಾದಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ್ದಾಳೆ. ಇದರಿಂದ ಕಾರು ಎದುರಿಗೆ ನಿಂತಿದ್ದ ಅಜ್ಜಪ್ಪನ ಮೈ ಮೇಲೆ ಹರಿದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಆದರೆ, ದಾರಿ ಮಧ್ಯೆಯೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net