

ಪತಿ ಆದಾಯ ಪರಿಗಣಿಸಲಾಗದು
ಆದಾಯ ದೃಢೀಕರಿಸುವಾಗ ಪಾಲಕರ ಪಿಂಚಣಿಯನ್ನು ಪರಿಗಣಿಸಬಾರದು ಎಂದು ಏಕಸದಸ್ಯ ನ್ಯಾಯಪೀಠ ನೀಡಿದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದೆ ರೀತಿ ತನ್ನ ಪಾಲಕರ ಆದಾಯದ ಬದಲಾಗಿ ಪತಿಯ ಆದಾಯ ದಾಖಲೆಗಳನ್ನು ಪರಿಗಣಿಸುವಂತೆ ಮಹಿಳೆಯೂ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮಹಿಳೆಯ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಕೆನೆಪದರ ನೀತಿಯು ಪಾಲಕರ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿದೆಯೇ ಹೊರತು ಪತಿಯ ಆದಾಯದ ಮೇಲಲ್ಲ ಎಂದು ಸ್ಪಷ್ಟಪಡಿಸಿದೆ.
ಆದಾಯ ಮಿತಿಯೊಳಗಿದ್ದರೆ ಪರಿಗಣಿಸಿ
ಈ ಪ್ರಕರಣದಲ್ಲಿ ಪಾಲಕರ ಆದಾಯವು ಸರ್ಕಾರದ ಆದೇಶದಂತೆ 8 ಲಕ್ಷದೊಳಗಿದ್ದರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಲ್ಲಿ ಅರ್ಜಿದಾರರು ಮೀಸಲಾತಿಗೆ ಅರ್ಹರಾಗಿದ್ದಾರೆ. ಆದ್ದರಿಂದ, ತೀರ್ಪಿನ ಎರಡು ವಾರಗಳೊಳಗೆ ಅರ್ಜಿದಾರರ ಪಾಲಕರು ಕೆನೆಪದರದ ಒಳಗಿದ್ದಾರೆ ಎಂಬ ದಾಖಲಾತಿಗಳನ್ನು ಸಲ್ಲಿಸಿದರೆ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಅರ್ಜಿಯನ್ನು ಮರುಪರಿಶೀಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.