ಕೃಷಿ ಸಮಸ್ಯೆ ಅರಿಯಲು ಶಿಬಿರ ಉತ್ತಮ ವೇದಿಕೆ

ವಡಗೇರಾದಲ್ಲಿ ಮಂಗಳವಾರ ಹಮ್ಮಿಕೊಂಡ ಕೃಷಿ ಕಾರ್ಯಾನುಭವ ಶಿಬಿರವನ್ನು ಕೃಷಿ ವಿವಿಯ ಡೀನ್ ಡಾ.ಅಮರೇಗೌಡ ಚಾಲನೆ ನೀಡಿದರು. ಡಾ.ಶ್ಯಾಮರಾವ ಕುಲಕರ್ಣಿ, ಸಿದ್ದಣ್ಣಗೌಡ ಕಾಡಂನೋರ್, ಡಾ.ಸುಭಾಷ ಕರಣಗಿ, ಡಾ.ರುದ್ರಮೂರ್ತಿ, ಶ್ರೀನಿವಾಸರಾವ್ ಕುಲಕರ್ಣಿ, ಬಸವರಾಜ ನೀಲಹಳ್ಳಿ, ಯಂಕಪ್ಪ ಬಸಂತಪುರ, ಅಬ್ದುಲ್ ಚಿಗಾನೂರ, ಡಾ.ಮರೆಪ್ಪ ನಾಟೇಕಾರ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಇತರರಿದ್ದರು.
ವಡಗೇರಾದಲ್ಲಿ ಮಂಗಳವಾರ ಹಮ್ಮಿಕೊಂಡ ಕೃಷಿ ಕಾರ್ಯಾನುಭವ ಶಿಬಿರವನ್ನು ಕೃಷಿ ವಿವಿಯ ಡೀನ್ ಡಾ.ಅಮರೇಗೌಡ ಚಾಲನೆ ನೀಡಿದರು. ಡಾ.ಶ್ಯಾಮರಾವ ಕುಲಕರ್ಣಿ, ಸಿದ್ದಣ್ಣಗೌಡ ಕಾಡಂನೋರ್, ಡಾ.ಸುಭಾಷ ಕರಣಗಿ, ಡಾ.ರುದ್ರಮೂರ್ತಿ, ಶ್ರೀನಿವಾಸರಾವ್ ಕುಲಕರ್ಣಿ, ಬಸವರಾಜ ನೀಲಹಳ್ಳಿ, ಯಂಕಪ್ಪ ಬಸಂತಪುರ, ಅಬ್ದುಲ್ ಚಿಗಾನೂರ, ಡಾ.ಮರೆಪ್ಪ ನಾಟೇಕಾರ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ವಿವಿ ಡೀನ್ ಡಾ.ಅಮರೇಗೌಡ ಹೇಳಿಕೆ
  • ವಡಗೇರಾದಲ್ಲಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ
ವಡಗೇರಾ:

ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವದೊಂದಿಗೆ ಸಂಯೋಜಿಸುವುದು ಮತ್ತು ಕೃಷಿ ಸಮಸ್ಯೆಯನ್ನು ಅರಿಯಲು ಈ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಕೃಷಿ ಮಹಾ ವಿದ್ಯಾಲಯದ ಡೀನ್ ಡಾ.ಅಮರೇಗೌಡ ಹೇಳಿದರು.

ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಆಶ್ರಯದಲ್ಲಿ ಅಂತಿಮ ವರ್ಷದ ಬಿ.ಎಸ್.ಸಿ. (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ೭೦ ದಿನಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಅಧ್ಯಯನ ಮಾಡುವುದರ ಜತೆಗೆ ವೈಜÁ್ಞನಿಕ ಕೃಷಿ ತಂತ್ರಜÁ್ಞನಗಳನ್ನು ಪರಿಚಯಿಸಲಿದ್ದಾರೆ. ಗ್ರಾಮಸ್ಥರು ಹಾಗೂ ರೈತರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದರು.
ರಾವೆ ಸಂಯೋಜಕ ಡಾ.ಶ್ಯಾಮರಾವ ಕುಲಕರ್ಣಿ ಮಾತನಾಡಿ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜÁ್ಞನ, ನಾಯಕತ್ವ, ಸಂವಹನ ಕೌಶಲ ಹಾಗೂ ಕೃಷಿ ವಿಸ್ತರಣಾ ಸೇವೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ರೈತರೊಂದಿಗೆ ನಿಕಟ ಸಂಪರ್ಕ ಬೆಳೆಸಲು ಬಹಳ ಅನುಕೂಲವಾಗಿದೆ ಎಂದರು.
ಹತ್ತಿ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಗುಲಾಬಿ ಕಾಯಿಕೊರಕ, ಬಿಳಿ ನೊಣ, ಎಲೆ ಮಡಿಕೆ, ಪೊಷಕಾಂಶಗಳ ಕೊರತೆ ಹಾಗೂ ನೀರಿನ ಸಮರ್ಪಕ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿ, ಸಮಗ್ರ ಬೆಳೆ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಗ್ರಾಮದ ಮುಖಂಡ ಸಿದ್ದಣ್ಣಗೌಡ ಕಾಡಂನೋರ್, ನವೀನ ಮಾತನಾಡಿದರು. ಈ ವೇಳೆ ಡಾ.ಸುಭಾಷ ಕರಣಗಿ, ಡಾ.ರುದ್ರಮೂರ್ತಿ, ಶ್ರೀನಿವಾಸರಾವ್ ಕುಲಕರ್ಣಿ, ಬಸವರಾಜ ನೀಲಹಳ್ಳಿ, ಯಂಕಪ್ಪ ಬಸಂತಪೂರ, ಅಬ್ದುಲ್ ಚಿಗಾನೂರ, ಡಾ. ಮರೆಪ್ಪ ನಾಟೇಕಾರ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಬಸವರಾಜ ಸೊನ್ನದ, ಗೌರಿಶಂಕರ ಇತರರಿದ್ದರು. ವಿದ್ಯಾರ್ಥಿಗಳಾದ ಓಂಪ್ರಕಾಶ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net