ಈ ವರದಿ ಜೈಲು ಆಡಳಿತದಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೈಲುಗಳಲ್ಲಿನ ಬ್ಯಾರಕ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು ವರದಿಯ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ. ಪ್ರಸ್ತುತ ಅನೇಕ ಜೈಲುಗಳಲ್ಲಿ ಕಾರಿಡಾರ್‌ಗಳು ಮತ್ತು ಪ್ರವೇಶ ದ್ವಾರಗಳಲ್ಲಿ ಮಾತ್ರ ಕ್ಯಾಮರಾಗಳಿದ್ದು, ಬ್ಯಾರಕ್ ಒಳಗೆ ನಿಗಾ ವ್ಯವಸ್ಥೆ ಕೊರತೆಯಿರುವ ಕಾರಣ ಮೊಬೈಲ್ ಬಳಕೆ, ಮಾದಕ ವಸ್ತುಗಳ ಸಾಗಾಟ, ಬೆದರಿಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಿದೆ. ಬ್ಯಾರಕ್‌ಗಳಲ್ಲಿಯೇ ಸಿಸಿ ಕ್ಯಾಮರಾಗಳಿದ್ದರೆ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅನುಕೂಲವಾಗಲಿದೆ.