ತಮಿಳುನಾಡಿನ ಮಿತ್ರ ಪಕ್ಷವನ್ನು ತೃಪ್ತಿ ಪಡಿಸಲು ಕಾಂಗ್ರೆಸ್ ಸರ್ಕಾರ ನೀರು ನೀಡುತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದಕ್ಕೆ ಇದೇ ಕಾರಣ. ಈ ಬಗ್ಗೆ ಮುಂಚೆಯೇ ರೈತರ ಸಭೆ ಕರೆದು ಚರ್ಚಿಸಬೇಕಿತ್ತು. ಮಂಡ್ಯ, ಮೈಸೂರು, ಬೆಂಗಳೂರು ನಗರ ಮೊದಲಾದ ಭಾಗಗಳ ರೈತರು ಈ ನೀರನ್ನು ನಂಬಿದ್ದಾರೆ. ಕಡಿಮೆ ನೀರಿರುವಾಗ ಸರ್ವಪಕ್ಷಗಳ ಸಭೆ ಕರೆದು ಮಾತಾಡಬೇಕಿತ್ತು. ರಾಜಕೀಯವೇ ಗೊತ್ತಿಲ್ಲದ ತಮಿಳುನಾಡು ಸಿಎಂ, ವಿಧಾನಸಭೆ ಕರೆದು ಈಗಾಗಲೇ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂಬ ನಿರ್ಣಯ ಕೈಗೊಂಡಿದ್ದಾರೆ.