ಹತ್ತಿಕುಣಿ ಕಾಲುವೆ ದುರಸ್ತಿಗೆ ಸಚಿವ ಸಂಪುಟ ಒಪ್ಪಿಗೆ

,
,
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್​ ಖರ್ಗೆ ಮಾಹಿತಿ
  • 72 ಕೋಟಿ ರೂ. ಮಂಜೂರು
ಯಾದಗಿರಿ: ತಾಲೂಕಿನ ಗುರುಮಠಕಲ್​ ಮತಕ್ಷೇತ್ರದ ಹತ್ತಿಕುಣಿ ಕ್ಲಸ್ಟರ್​ ಯೋಜನೆಯ 72 ಕೋಟಿ ರೂ. ಮೊತ್ತದ ಕಾಮಗಾರಿಯ ವಿನ್ಯಾಸ ವರದಿಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್​ ರ್ಖಗೆ ತಿಳಿಸಿದ್ದಾರೆ. 14 ಕಿಲೋ ಮೀಟರ್​ ಉದ್ದದ ಹತ್ತಿಕುಣಿ ಜಲಾಶಯ ಯೋಜನೆಯ ಎಡದಂಡೆ ಕಾಲುವೆಯನ್ನು 1973 ರಲ್ಲಿ ನಿರ್ಮಿಸಲಾಗಿತ್ತು. ಇದು ತಾಲೂಕಿನ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂಡಹಳ್ಳಿ, ದಸ್ತರಾಭಾದ ಮತ್ತು ಮಂಡರಗಿಯ ಬರಪೀಡಿತ ಗ್ರಾಮಗಳಿಗೆ ಸೇರಿದ 5300 ಎಕರೆ ಕೃಷಿ ಯೋಗ್ಯ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಉದ್ದೇಶ ಹೊಂದಿದೆ.
ಈ ಕಾಲುವೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದೇ ಇರುವುದರಿಂದ ಕಾಲುವೆಯಲ್ಲಿ ನೀರಿನ ಹರವಿನ ಪ್ರಮಾಣ ಕುಸಿದಿರುವುದರಂದ ಹಾಗೂ ಅಲಬೂರು, ಬಾದರ್ಲಿ, ಗಿಣಿವಾರ, ಹರತನೂರು, ಮತ್ತು ವೆಂಗಲಾಪುರ ಗ್ರಾಮಗಳ ಕೊನೆಯ ರೈತರ ಭೂಮಿಗೂ ನೀರು ದೊರೆಯುವಂತಾಗಲು ಶಿಥಿಲಾವಸ್ಥೆಯಲ್ಲಿರುವ ಹತ್ತಿಕುಣಿ ಜಲಾಶಯ ಕಾಲುವೆಯ ದುರಸ್ತಿ ಕೈಗೊಳ್ಳಲಾಗುವುದೆಂದು ಸಚಿವ ಪ್ರಿಯಾಂಕ್​ ರ್ಖಗೆ ಅವರು ವಿವರವಾದ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಈ ಬಗ್ಗೆ ಸಮಗ್ರ ವಿವರವಾಗಿ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಸಚಿವ ರ್ಖಗೆ ಅವರ ಗಮನಕ್ಕೆ ತಂದು ಕೆಲಸ ಮಾಡಿಸುವಂತೆ ಕೋರಿದ್ದರು. ಆಗ ಸಚಿವರು ಈ ಬಗ್ಗೆ ಸೂಕ್ತ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಇದು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದನ್ನು ಇಲ್ಲಿ ಸ್ಮರಿಸಬಹುದು.
ಶಾಸಕ ಶರಣಗೌಡ ಕಂದಕೂರ ಹೇಳಿಕೆ
ಗುರುಮಠಕಲ್​ ಅಭಿವೃದ್ಧಿಗೆ ಮತ್ತೊಂದು ಗರಿ
ಯಾದಗಿರಿ: ಗುರುಮಠಕಲ್​ ಮತೇತ್ರದ ಹತ್ತಿಕುಣಿ ಕ್ಲಸ್ಟರ್​ ಯೋಜನೆಯ 72 ಕೋಟಿ ರೂ. ಮೊತ್ತದ ಕಾಮಗಾರಿಯ ವಿನ್ಯಾಸ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದಕ್ಕೆ ಶಾಸಕ ಶರಣಗೌಡ ಕಂದಕೂರ ಸ್ವಾಗತಿಸಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಅವರ ವಿಶೇಷ ಕಾಳಜಿ ಹಾಗೂ ತಮ್ಮ ಸತತ ಮೂರು ತಿಂಗಳ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಜಯವಿದು ಎಂದು ಅವರು ಬಣ್ಣಿಸಿದ್ದಾರೆ. ಅಧಿವೇಶನದಲ್ಲಿ ಮತ್ತು ಸರ್ಕಾರದೊಂದಿಗೆ ತಾವು ಸತತ ಮೂರು ತಿಂಗಳಿಂದ ಮಾಡಿದ ಪ್ರಯತ್ನ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ತಮ್ಮ ಬೇಡಿಕೆಗೆ ಸ್ಪಂದಿಸಿದ್ದಕ್ಕೆ ೇತ್ರದ ರೈತರ ದಶಕಗಳ ಕನಸಾದ 5,400 ಎಕರೆ ಭೂಮಿಗೆ ಶಾಶ್ವತ ನೀರಾವರಿ ಕಲ್ಪಿಸುವ ಈ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಗುರುಮಠಕಲ್​ ೇತ್ರಕ್ಕೆ ಇದು ಹಬ್ಬದ ಸಂಭ್ರಮ ತಂದಿದೆ ಎಂದು ಶಾಸಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಭಾಂದವ್ಯದ ಫಲವೆಂದು ಬಣ್ಣಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net