ಲೆಟರ್ ಹೆಡ್ನಲ್ಲಿ ಹೆಸರು ಕಳಿಸುವ ಎಐಸಿಸಿ ಆದೇಶಕ್ಕೆ ಪ್ರತಿಕ್ರಿಯಿಸಿರುವ ಅವರು, ಪಕ್ಷಗಳು ಆಂತರಿಕವಾಗಿ ಸಲಹೆ ಕೊಡುವ ಪದ್ದತಿ ಮೊದಲಿನಿಂದಲೂ ಇದೆ. ಆದರೆ ಇದು ಸಲಹೆ ಅಲ್ಲ, ಆದೇಶ. ಕರ್ನಾಟಕ ರಾಜ್ಯದ ಜನರಿಗೆ ಮಾಡಿದ ಅಪಮಾನ. ಸಿದ್ದರಾಮಯ್ಯ ಅವರು ಈ ಬಗ್ಗೆ ಏನು ಹೇಳ್ತಾರೆ? ಇದೊಂದು ಗುಲಾಮಗಿರಿ. ಸಲಹೆ ಕೊಡೋದು ಬೇರೆ, ಆದೇಶ ಬೇರೆ. ಸಾಂವಿಧಾನಿಕ ಹುದ್ದೆಗಳಿಗೂ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ. ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.