ವಿದೇಶಿ ವಸ್ತು ಖರೀದಿ ದೇಶದ ಆರ್ಥಿಕತೆಗೆ ಪೆಟ್ಟು

ಹುಣಸೂರು ನಗರದ ರೋಟರಿ ಭವನದಲ್ಲಿ ಯೂತ್ ಫಾರ್ ನೇಷನ್ ತಂಡದ ವತಿಯಿಂದ ಆಯೋಜಿಸಿರುವ ಸ್ವದೇಶಿ ಜಾಗರಣ ಅಭಿಯಾನದ ಕಾರ್ಯಕ್ರಮದಲ್ಲಿ ರವಿ ಮುನಿಸ್ವಾಮಿ ಮಾತನಾಡಿದರು. ವೇದಮೂರ್ತಿ, ನೀಲಕಂಠ, ಜಾಹೀರ್ ಎಚ್.ಆರ್.ಕೃಷ್ಣಕುಮಾರ್, ರಾಜಶೇಖರ್, ಆರ್.ಆನಂದ್ ಇತರರು ಇದ್ದರು.
ಹುಣಸೂರು ನಗರದ ರೋಟರಿ ಭವನದಲ್ಲಿ ಯೂತ್ ಫಾರ್ ನೇಷನ್ ತಂಡದ ವತಿಯಿಂದ ಆಯೋಜಿಸಿರುವ ಸ್ವದೇಶಿ ಜಾಗರಣ ಅಭಿಯಾನದ ಕಾರ್ಯಕ್ರಮದಲ್ಲಿ ರವಿ ಮುನಿಸ್ವಾಮಿ ಮಾತನಾಡಿದರು. ವೇದಮೂರ್ತಿ, ನೀಲಕಂಠ, ಜಾಹೀರ್ ಎಚ್.ಆರ್.ಕೃಷ್ಣಕುಮಾರ್, ರಾಜಶೇಖರ್, ಆರ್.ಆನಂದ್ ಇತರರು ಇದ್ದರು.
Published on
ಹುಣಸೂರು: ಸ್ವದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕ ಸ್ಥಿರತೆಯೊಂದಿಗೆ ಸ್ವಾಭಿಮಾನಿ ದೇಶ ನಿರ್ಮಾಣ ಸಾಧ್ಯ ಎಂದು ರೋಟರಿ ಕ್ಲಬ್ ಸದಸ್ಯ ಹಾಗೂ ಯೂತ್ ಫಾರ್ ನೇಷನ್ ನಿರ್ದೇಶಕ ರವಿ ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಯೂತ್ ಫಾರ್ ನೇಷನ್ ಸಂಘಟನೆಯ ಸದಸ್ಯರೊಂದಿಗೆ ರಾಜ್ಯಾದ್ಯಂತ ಸೈಕ್ಲಿಂಗ್ ಮೂಲಕ ಸ್ವದೇಶಿ ಜಾಗರಣ್ ಅಭಿಯಾನ ಕೈಗೊಂಡಿರುವ ತಂಡವು ಬುಧವಾರ ಹುಣಸೂರು ರೋಟರಿ ಕ್ಲಬ್‌ಗೆ ಭೇಟಿ ನೀಡಿದ ವೇಳೆ ರೋಟರಿ ಸದಸ್ಯರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

ಈ ನೆಲದ ಸಂಸ್ಕೃತಿ, ಪರಂಪರೆ ಮತ್ತು ಆರ್ಥಿಕತೆ ಉಳಿಸಿಕೊಳ್ಳಲು ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸುವ ಮೊದಲ ಹೆಜ್ಜೆ ನಮ್ಮದಾಗಬೇಕು. ಸ್ಥಳೀಯ ಕಲೆಗಾರರು, ಕರಕುಶಲಕರ್ಮಿಗಳು, ಕೃಷಿಕರಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಅವರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಆರ್ಥಿಕ ಸಂಪತ್ತು ನಮ್ಮ ಸುತ್ತಲೇ ಸುತ್ತುತ್ತಿರುವಂತೆ ಮಾಡಬೇಕು. ಆದರೆ ವಿದೇಶಿ ವ್ಯಾಮೋಹಕ್ಕೆ ತುತ್ತಾಗಿರುವ ನಾವು ವಿದೇಶಿ ವಸ್ತುಗಳನ್ನು ಹಮ್ಮಿನಿಂದ ಖರೀದಿಸಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುತ್ತಿದ್ದು, ಇದು ನಿಲ್ಲಬೇಕಿದೆ ಎಂದರು.

ಜನರಲ್ಲಿ ಜಾಗೃತಿ ಮೂಡಿಸಲು ಯೂತ್ ಫಾರ ನೇಷನ್ ವತಿಯಿಂದ ರಾಜ್ಯಾದ್ಯಂತ ಸೈಕ್ಲಿಂಗ್ ಅಭಿಯಾನ ನಡೆಸಿದ್ದು, ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಮುಂತಾದ ಸರ್ಕಾರದ ಕಾರ್ಯಕ್ರಮಗಳ ಮೂಲ ಉದ್ದೇಶವೂ ಇದೇ ಆಗಿದ್ದು, ದೇಶದ ಯುವಕರು ಸ್ವದೇಶಿ ಅಭಿಯಾನದತ್ತ ಹೆಚ್ಚು ಗಮನ ನೀಡಬೇಕು ಎಂದು ಕೋರಿದರು.

ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಮಾತನಾಡಿ, ರೋಟರಿ ಮತ್ತು ಯೂತ್ ಫಾರ್ ನೇಷನ್ ತಂಡವು ಸ್ವದೇಶಿ ಜಾಗರಣ ಎಂಬ ಘೋಷವಾಕ್ಯದೊಂದಿಗೆ ಸ್ವದೇಶಿ ವಸ್ತುಗಳ ಬಳಕೆಗೆ ಸೈಕ್ಲಿಂಗ್ ಮೂಲಕ ಅಭಿಯಾನ ಕೈಗೊಂಡು ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ರೋಟರಿ ಸದಸ್ಯರಾದ ಆನಂದ್, ರಾಜಶೇಖರ್, ಎ.ವಿ.ಕೆ.ಮೋಹನ್, ವೇದಮೂರ್ತಿ, ನೀಲಕಂಠ, ಜಾಹೀರ್, ಕಂಡಸ್ವಾಮಿ, ಗೋಪಾಲ ಕೃಷ್ಣ ಪಿಳ್ಳೆ, ಧೀರಾಜ್, ಸಾಗರ್, ರಮೇಶ್, ನರಸಯ್ಯ, ಸಂತೋಷ್, ರೋಟರಿ ಶಾಲೆ ಮುಖ್ಯ ಶಿಕ್ಷಕ ಬಿ.ಹರೀಶ್, ಶಿಕ್ಷಕರಾದ ಷರೀಪ್, ಅಕ್ಮಲ್, ಪ್ರಸನ್ನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net