ಭಾಷೆ ಉಳಿವಿನಲ್ಲಿ ಕಸಾಪ ಪಾತ್ರ ಪ್ರಮುಖ

Butchery plays a key role in language survival
Butchery plays a key role in language survival
Published on
ಚಿಕ್ಕನಾಯಕನಹಳ್ಳಿ: ಕರ್ನಾಟಕದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಉಳಿವಿಗೆ ಸಾಹಿತ್ಯ ಪರಿಷತ್​ ಮುಖ್ಯ ಪಾತ್ರ ವಹಿಸಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್​.ರವಿಕುಮಾರ್​ ಕಟ್ಟೆಮನೆ ತಿಳಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಿದ್ದ ಸಾಹಿತ್ಯ ಪರಿಷತ್​ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದ್ದು, ಇದರ ಬೆಳವಣಿಗೆಯಲ್ಲಿ ಅನೇಕ ಜನರ ತ್ಯಾಗ ಮತ್ತು ಪರಿಶ್ರಮವಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರು, ಮತ್ತು ಸರ್​.ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಪರಿಷತ್​ ಈ ನಾಡಿನ ಭಾಷೆ ಸಂಸತಿ ಬೆಳವಣಿಗೆಯಲ್ಲಿ ಅಪಾರವಾದ ಕೊಡುಗೆ ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಪರಿಷತ್​ನಲ್ಲಿ ಅನೇಕ ವಿದ್ಯಮಾನ ನಡೆಯುತ್ತಿದ್ದು, ಇದು ಪರಿಷತ್​ನ ಬೆಳವಣಿಗೆಗೆ ಪೂರಕವಲ್ಲ ಎಂದರು
.
ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ನಾಗರಾಜ್​ ಕುಮಾರ್​ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ ನಿಮಾರ್ಣದಲ್ಲಿ ಅನೇಕ ಘಟನೆ ನಡೆದಿದ್ದು, ಕರ್ನಾಟಕ ಏಕೀಕರಣದ ಭಾಗವಾಗಿ ಸಾಹಿತ್ಯ ಪರಿಷತ್​ ಕಾರ್ಯ ನಿರ್ವಹಿಸಿದೆ. ಇದರಲ್ಲಿ ಕುವೆಂಪು, ಡಿವಿಜಿಯವರ ಸ್ಥಾನ ಹಿರಿದು. ಏಕೀಕರಣವಾದ ನಂತರದಲ್ಲಿ ಪರಿಷತ್​ ಅನೇಕ ಚಟುವಟಿಕೆಗಳ ಮೂಲಕ ಕನ್ನಡಿಗರ ಮನೆಮನೆಯನ್ನು ತಲುಪಿ ಇಂದು ಸಾವಿರಾರು ಸದಸ್ಯರನ್ನು ಒಳಗೊಂಡಿದೆ ಎಂದರು.
ಪರಿಷತ್​ನ ಉಪಾಧ್ಯಕ್ಷ ಎಂ.ವಿ.ರಾಜಕುಮಾರ್​ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್​ 111 ವರ್ಷಗಳ ಇತಿಹಾಸವನ್ನು ಒಳಗೊಂಡು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕನ್ನಡಿಗರಿಗೆ ಇದೊಂದು ಅಭಿಮಾನದ ಸಂಕೇತ ಎಂದರು.
ಕನ್ನಡ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್​ ಮಗ್ಗದಮನೆ, ಕೋಶಧ್ಯಕ್ಷ ಯೋಗೀಶ್​ ಕುಮಾರ್​, ಗೌರವ ಕಾರ್ಯದರ್ಶಿಗಳಾದ ನಿರೂಪ ರಾವತ್​, ರವಿಕುಮಾರ್​, ಹೋಬಳಿ ಘಟಕದ ಕಿರಣ್​ ನಿಶಾನಿ, ನವೀನ್​ ರಾವತ್​, ಪ್ರಸನ್ನ, ಶ್ರೀಮತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net