ಉದ್ಯಮಿ kidnap : ಚಿಕ್ಕಮಗಳೂರಲ್ಲಿ ಓರ್ವ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ವಿಶೇಷ ತಂಡ ರಚನೆ, ತನಿಖೆ ಚುರುಕು
  • ಪಾಲುದಾರಿಕೆ ವ್ಯವಹಾರದಲ್ಲಿದ್ದವರಿಂದಲೇ ಕೃತ್ಯ ಶಂಕೆ!
ಬೆಂಗಳೂರು: ರೈಸ್ pulling ದಂಧೆ ವಂಚನೆಯ ಆರೋಪಿ, ಉದ್ಯಮಿಯನ್ನು ಅಪಹರಿಸಿ 1.9 ಕೋಟಿ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಮಾದನಾಯನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮುನಿಸ್ವಾಮಿರೆಡ್ಡಿ ಲೇಔಟ್ ನಿವಾಸಿಯಾಗಿರುವ ಆರ್.ಐ.ಶಿವಶಂಕರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಿದ್ದಾರೆ. ಅಪಹರಣ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಸೇರಿ ತಾಂತ್ರಿಕ ಮಾಹಿತಿ ಸಂಗ್ರಹಿಸಿ, ಏಳು ಜನರ ಪೈಕಿ ಕೆಲವರು ಚಿಕ್ಕಮಗಳೂರಿಗೆ ಪರಾರಿಯಾಗಿದ್ದವರು. ಅವರಲ್ಲಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹೊರ ರಾಜ್ಯಕ್ಕೆ ಪರಾರಿ:

ಪ್ರಕರಣದ ಪ್ರಮುಖ ಆರೋಪಿ ಹೊರ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರ ಒಂದು ತಂಡ ನೆರೆಯ ರಾಜ್ಯಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಉದ್ಯಮಿ ಶಿವಶಂಕರ್ ತಮ್ಮ ಸ್ನೇಹಿತ ಚೇತನ್ ಜತೆ ಜೂ.15ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕುದುರೆಗೆರೆ ಗಣೇಶ ದೇವಸ್ಥಾನದ ಬಳಿ ಕಾರು ಅಡ್ಡಗಟ್ಟಿದ ದರೋಡೆಕೋರರು ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಅಪಹರಿಸಿದರು. ಕಾರಿನ ಡಿಕ್ಕಿಯಲ್ಲಿದ್ದ 74 ಲಕ್ಷ ರೂ. ದೋಚಿದಲ್ಲದೇ, ಅವರ ಮನೆಯಲ್ಲಿಟ್ಟಿದ್ದ 35 ಲಕ್ಷ ರೂ.ವನ್ನೂ ತರಿಸಿಕೊಂಡು ಪರಾರಿಯಾಗಿದ್ದರು.
ಸ್ನೇಹಿತರ ಮೇಲೆಯೇ ಶಂಕೆ:
ಹಣವಿರುವುದು ಗೊತ್ತಿದ್ದವರೇ ಸಂಚು ರೂಪಿಸಿ ದರೋಡೆ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡೆಸಿರುವ ಪೊಲೀಸರು, ಸ್ನೇಹಿತರ ನಡುವೆಯೇ ಈ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ವಶಕ್ಕೆ ಪಡೆದಿರುವ ಆರೋಪಿಯ ಹೇಳಿಕೆ ಆಧಾರದ ಮೇಲೆ ಉಳಿದ ಆರೋಪಿಗಳು ಬಂಧನವಾಗುವ ಸಾಧ್ಯತೆ ಇದೆ.
ದೂರುದಾರ ಶಿವಶಂಕರ್ ಈ ಹಿಂದೆ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಸಕ್ರಿಯವಾಗಿದ್ದು, ಕಳೆದ ವರ್ಷ ವಿ.ವಿ. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಕಳೆದುಕೊಂಡಿರುವ ಹಣ ಸಹ ರೈಸ್ ಪುಲ್ಲಿಂಗ್ ದಂಧೆಗೆ ಸಂಬಂಧಿಸಿರುವ ಅನುಮಾನವಿದೆ ಎನ್ನಲಾಗಿದೆ. ಶಿವಂಕರ್ ಜತೆ ಪಾಲುದಾರಿಕೆಯಲ್ಲಿ ಡಿ360 ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದರು. ರೈಸ್ ಪುಲ್ಲಿಂಗ್ ಹಾಗೂ ವಿಗ್ರಹಗಳ ಖರೀದಿ ವ್ಯವಹಾರದಲ್ಲಿ ಆಸ್ತಿ ಹೊಂದಿರುವ ಶಿವಶಂಕರ್, ಆಂಧ್ರಪ್ರದೇಶದ ಮೊಹಮದ್ ಪರ್ವೇಜ್, ಜಿಪ್ಸನ್ ಹಾಗೂ ಅಲಿ ಜತೆಗೆ ಅಮೆರಿಕನ್ ನ್ಯೂಕ್ಲಿಯರ್ ರೀಸರ್ಚ್ ಸೆಂಟರ್ ಹೆಸರಿನಲ್ಲಿ ಕಂಪನಿ ಆರಂಭಿಸಲು ನಿರ್ಧರಿಸಿದ್ದರು. ಈ ಎಲ್ಲ ಪಾಲುದಾರಿಕೆ ವ್ಯವಹಾರದ ಬಗ್ಗೆ ಗೊತ್ತಿರುವವರೆಗೆ ಅಪಹರಣ ಹೆಸರಿನಲ್ಲಿ ಹಣ ದೋಚಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net