ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಆಧುನಿಕ ಮಾರುಕಟ್ಟೆಯು ಗ್ರಾಹಕರಿಗೆ ವಿನೂತನ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿವೆ. ಅಂತರ್ಜಾಲ ತಾಣಗಳು ಸರಕು ಸೇವೆಗಳ ಗುಣಲಕ್ಷಣಗಳನ್ನು ಪರಾಮರ್ಶಿಸಲು ಸಹಕರಿಸಿ, ಜಾಗತಿಕ ಮಾರುಕಟ್ಟೆ ಒದಗಿಸುತ್ತಿವೆ. ಸಂತೃಪ್ತ ಗ್ರಾಹಕರು ನೀಡಿದ ರೇಟಿಂಗ್ ಆಧರಿಸಿ ಗ್ರಾಹಕರು ಖರೀದಿ ಮಾಡಬೇಕೋ, ಬೇಡವೋ ಎಂದು ನಿರ್ಧರಿಸುತ್ತಾರೆ. ಆದುದರಿಂದ ಯುವಜನರು ತಂತ್ರಜ್ಞಾನ ಬಳಸಿ ನಾವೀನ್ಯತೆಯ ಉದ್ಯಮ ಕಟ್ಟಿ ಉದ್ಯಮಿಗಳಾಗಿ ಎಂದರು. ಉಪನ್ಯಾಸಕರಾದ ಡಾ.ಕುಮಾರಗೌಡ, ಕೆ.ಎಸ್.ಮಹಾಲಕ್ಷಿ$್ಮ, ಡಾ.ಕುಸುಮಾ, ವಿದ್ಯಾ, ಮೇಘಾ ಇದ್ದರು.