ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​... ನಿಮ್ಮ ಹೂಡಿಕೆಯನ್ನು ಆರ್ಥಿಕತೆಯೊಂದಿಗೆ ಹೊಂದಿಸಿ! Business Cycle Investing

| ಅನಿಲ್ ಶರಣ ಬಸವೇಶ್ವರ, ಧನ್ಯೋಗ್
| ಅನಿಲ್ ಶರಣ ಬಸವೇಶ್ವರ, ಧನ್ಯೋಗ್
Published on

ಪ್ರಮುಖ ಮುಖ್ಯಾಂಶಗಳು

  • ಷೇರು ಮಾರುಕಟ್ಟೆಯಲ್ಲಿ ಯಾವುದೇ ಟ್ರೆಂಡ್ ಅಥವಾ ವ್ಯವಹಾರ​ ಸ್ಥಿರವಾಗಿರುವುದು ತುಂಬಾನೇ ವಿರಳ
  • ಹೂಡಿಕೆದಾರರು ಈಗ ಆರ್ಥಿಕ ಬದಲಾವಣೆಗೆ ಹೊಂದಿಕೊಳ್ಳುವ ಯೋಜನೆಗಳನ್ನು ಗುರುತಿಸುತ್ತಿದ್ದಾರೆ
  • ಇಂತಹ ಹೂಡಿಕೆ ಯೋಜನೆಗಳಲ್ಲಿ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ಕೂಡ ಒಂದು
  • ಯಾವ ಸೆಕ್ಟರ್‌ಗಳು ಉತ್ತಮ ಪ್ರದರ್ಶನ ತೋರುತ್ತವೆಯೋ ಅವುಗಳಲ್ಲಿ ಹೂಡಿಕೆ ಮಾಡುವ ವಿಧಾನ
Business Cycle Investing : ಷೇರು ಮಾರುಕಟ್ಟೆ ಅಂದರೆ ಸಾಕಷ್ಟು ಏರಿಳಿತಳು ಸಂಭವಿಸುತ್ತವೆ. ಹೂಡಿಕೆ ಮಾಡಿದವರಿಗೆ ಇದರ ಅನುಭವ ಚೆನ್ನಾಗಿ ಆಗಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಯಾವುದೇ ಟ್ರೆಂಡ್ ಅಥವಾ ವ್ಯವಹಾರ​ ಸ್ಥಿರವಾಗಿರುವುದು ತುಂಬಾನೇ ವಿರಳ. ಹೀಗಾಗಿ ಹೂಡಿಕೆದಾರರು ಈಗ ಆರ್ಥಿಕ ಬದಲಾವಣೆ ಅಥವಾ ಮಾರುಕಟ್ಟೆಯ ಏರಿಳಿತಗಳಿಗೆ ಹೊಂದಿಕೊಳ್ಳುವ ಯೋಜನೆಗಳನ್ನು ಗುರುತಿಸುತ್ತಿದ್ದಾರೆ. ಇಂತಹ ಹೂಡಿಕೆ ಯೋಜನೆಗಳಲ್ಲಿ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ಕೂಡ ಒಂದು. 
ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ಆರ್ಥಿಕತೆಯ ನಾಲ್ಕು ಹಂತಗಳಾದ ರಿಕವರಿ, ಬೂಮ್, ಸ್ಲೋಡೌನ್ ಹಾಗೂ ಸ್ಲಂಪ್​ಗಳನ್ನು ಗುರುತಿಸಿ, ಪ್ರತಿ ಹಂತದಲ್ಲಿ ಯಾವ ಸೆಕ್ಟರ್‌ಗಳು ಉತ್ತಮ ಪ್ರದರ್ಶನ ತೋರುತ್ತವೆಯೋ ಅವುಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ವಿಧಾನವಾಗಿದೆ. ಅಂದರೆ, ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ, ಹೂಡಿಕೆದಾರರ ಅಪಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಆದಾಯವನ್ನು ಹೆಚ್ಚಿಸುವ ಗುರಿಯನ್ನು ಇದು  ಹೊಂದಿದೆ.

ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ಹೂಡಿಕೆ ಎಂದರೇನು?

ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್,​ ಪೋರ್ಟ್‌ಫೋಲಿಯೊಗಳನ್ನು ಆರ್ಥಿಕತೆಯ ಪ್ರತಿ ಹಂತಕ್ಕೂ ಸರಿಹೊಂದಿಸುತ್ತದೆ. ಏಕೆಂದರೆ, ಪ್ರತಿಯೊಂದು ಹಂತವು ಗಳಿಕೆ, ಬೇಡಿಕೆ ಮತ್ತು ಹೂಡಿಕೆ ವಲಯದ ಕಾರ್ಯಕ್ಷಮತೆಯ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ. ಈ ಹೂಡಿಕೆ ವಿಧಾನದಲ್ಲಿ ಪ್ರೊಫೆಸನಲ್​ ಫಂಡ್​ ಮ್ಯಾನೇಜರ್​ಗಳು ಮ್ಯಾಕ್ರೋ ಸೂಚಕಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಾರೆ ಮತ್ತು ಎಲ್ಲಿ ಅವಕಾಶಗಳು ಪ್ರಬಲವಾಗಿರುತ್ತದೋ ಅದರ ಫಲವನ್ನು ಪಡೆಯಲು ವಲಯಗಳು, ಮಾರುಕಟ್ಟೆ ಮಿತಿಗಳು ಮತ್ತು ಥೀಮ್‌ಗಳ ನಡುವೆ ಹೂಡಿಕೆಯನ್ನು ಸರಿಯಾಗಿ ಹಂಚಿಕೆ ಮಾಡುತ್ತಿರುತ್ತಾರೆ. 

ಆರ್ಥಿಕ ಅಥವಾ ಬಿಸಿನೆಸ್​ ಸೈಕಲ್​ನ ನಾಲ್ಕು ಹಂತಗಳು ಯಾವುವು?

ಆರ್ಥಿಕತೆಯ ನಾಲ್ಕು ಹಂತಗಳು ಯಾವುವೆಂದರೆ, ರಿಕವರಿ, ಎಕ್ಸ್​ಪೆನ್ಸನ್​, ಸ್ಲೋಡೌನ್ ಹಾಗೂ ಸ್ಲಂಪ್​. ಚೇತರಿಕೆ (Recovery) ಅಂತಾ ಬಂದಾಗ ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಉತ್ಪಾದನೆಯಂತಹ ವಲಯಗಳು ಮಾರುಕಟ್ಟೆಯಲ್ಲಿ ಮೊದಲು ಚೇತರಿಸಿಕೊಳ್ಳುತ್ತವೆ. ಅದೇ ರೀತಿ ವಿಸ್ತರಣೆ (Expansion) ಹಂತದಲ್ಲಿ ಬಲವಾದ ಬೇಡಿಕೆಯು ಗ್ರಾಹಕರ ವಿವೇಚನೆ, ಆಟೋ ಮೊಬೈಲ್​ಗಳು, ಇಂಧನ ಮತ್ತು ಲೋಹಗಳನ್ನು ಮೇಲಿನ ಹೂಡಿಕೆಯನ್ನು ಹೆಚ್ಚಿಸುತ್ತದೆ. ಸ್ಲೋಡೌನ್​ ಹಂತದಲ್ಲಿ ಸ್ಟೇಪಲ್ಸ್, ಫಾರ್ಮಾ ಮತ್ತು ಐಟಿಯಂತಹ ಕಡಿಮೆ ಖರ್ಚಿನ ರಕ್ಷಣಾತ್ಮಕ ಸಾಧನಗಳಿಗೆ ಅನುಕೂಲಕರವಾಗಿರುತ್ತದೆ. ಸ್ಲಂಪ್​ ಹಂತದಲ್ಲಿ ಹೆಲ್ತ್​ ಕೇರ್​ ಮತ್ತು ಗುಣಮಟ್ಟದ ದೊಡ್ಡ ಬಂಡವಾಳ ಹೂಡಿಕೆಗಳನ್ನು ಸುರಕ್ಷಿತ ಆಯ್ಕೆಗಳನ್ನಾಗಿ ಮಾಡುತ್ತದೆ.

ಬಿಸಿನೆಸ್​ ಸೈಕಲ್​ಗಳು ಹೇಗೆ ಗುರುತಿಸುತ್ತದೆ?

ಹಣದುಬ್ಬರ, ಬಡ್ಡಿದರಗಳು, ಹಣಕಾಸಿನ ಖರ್ಚು ಮತ್ತು ಬಂಡವಾಳ ಹೂಡಿಕೆ ಟ್ರೆಂಡ್​ಗಳಂತಹ ಮ್ಯಾಕ್ರೋ ಡೇಟಾವನ್ನು ಬಿಸಿನೆಸ್​ ಸೈಕಲ್​ ಟ್ರ್ಯಾಕ್ ಮಾಡುತ್ತದೆ. ಅಲ್ಲದೆ, PMI ಮತ್ತು ವಿಶ್ವಾಸಾರ್ಹ ಸಮೀಕ್ಷೆಗಳು ಸೇರಿದಂತೆ ಬಿಸಿನೆಸ್​ ಸೆಂಟಿಮೆಂಟ್​ ಇಂಡಿಕೇಟರ್​ಗಳು ಕಂಪನಿಗಳು ಭವಿಷ್ಯದ ಬೇಡಿಕೆಯನ್ನು ಹೇಗೆ ನೋಡುತ್ತವೆ ಎಂಬುದನ್ನು ಬಹಿರಂಗಪಡಿಸುತ್ತವೆ. ಇದರೊಂದಿಗೆ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿನ ಬೆಳವಣಿಗೆಯ ನಿರೀಕ್ಷೆಗಳು ಅಥವಾ ಚೀನಾದಲ್ಲಿನ ನೀತಿ ಬದಲಾವಣೆಗಳಂತಹ ಜಾಗತಿಕ ಸಂಕೇತಗಳು ಸಹ ಮೌಲ್ಯಮಾಪನಗಳ ಮೇಲೆ ಪ್ರಭಾವ ಬೀರುತ್ತವೆ. ಸಾಲದ ಬೆಳವಣಿಗೆ ಮತ್ತು ಹೆಚ್ಚಿನ ವಿವೇಚನಾ ವೆಚ್ಚವು ಸಾಮಾನ್ಯವಾಗಿ ವಿಸ್ತರಣೆಯನ್ನು ಸೂಚಿಸುತ್ತದೆ ಆದರೆ, ಹೆಚ್ಚಿದ ಹಣದುಬ್ಬರ ಮತ್ತು ನಿಧಾನಗತಿಯ ಹೂಡಿಕೆಯು ಹಿಂಜರಿತದ ಕಡೆಗೆ ಸೂಚಿಸುತ್ತದೆ.

ಈ ಕಾರ್ಯತಂತ್ರ ಹೇಗೆ ಕೆಲಸ ಮಾಡುತ್ತೆ?

ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ವಲಯಗಳಾದ್ಯಂತ ಕ್ರಿಯಾತ್ಮಕ ಹಂಚಿಕೆಗೆ ಅನುಮತಿ ನೀಡುತ್ತದೆ. ಹೂಡಿಕೆಯಲ್ಲಿ ರಕ್ಷಣಾತ್ಮಕ ಬದಲಾವಣೆಗಳನ್ನು ಮಾಡುವ ಮೂಲಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಚಂಚಲತೆಯನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯ ಸಂಪತ್ತು ಸೃಷ್ಟಿಗಾಗಿ ವಿಶಾಲ ಆರ್ಥಿಕ ಟ್ರೆಂಡ್​ಗಳೊಂದಿಗೆ ಪೋರ್ಟ್ಫೋಲಿಯೊಗಳನ್ನು ಹೊಂದಿಸುತ್ತದೆ.

ನೀವೇಕೆ ಈ ನಿಧಿಗಳನ್ನು ಪರಿಗಣಿಸಬೇಕು?

ಮಾರುಕಟ್ಟೆಯಲ್ಲಿ ನಿರಂತರವಾಗಿ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸಿದರೆ, ಹೆಚ್ಚಿನ ಅಪಾಯವನ್ನು ನಿಯಂತ್ರಿಸುವುದಕ್ಕಾಗಿ ಮತ್ತು ಮೂರರಿಂದ ಐದು ವರ್ಷಗಳ ಅವಧಿಯನ್ನು ಹೊಂದಿರುವ ಹೂಡಿಕೆದಾರರಿಗೆ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ ಫಂಡ್​ ಸೂಕ್ತವಾಗಿವೆ.

ಅಂತಿಮ ತೀರ್ಮಾನವೇನು?

ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​, ಬಂಡವಾಳ ಹೂಡಿಕೆಯನ್ನು ಆರ್ಥಿಕ ಬದಲಾವಣೆಗಳಿಗೆ ಸರಿಹೊಂದಿಸಲು ಸೂಕ್ತವಾದ ಮಾರ್ಗವನ್ನು ಒದಗಿಸುತ್ತದೆ. ಇಲ್ಲಿ ಹೂಡಿಕೆದಾರರು ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಪಾಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮಾರುಕಟ್ಟೆಯ ವ್ಯಾಪರದ ಚಕ್ರವು ತುಂಬಾ ಸವಾಲಿನದ್ದಾಗಿರುವುದರಿಂದ, ಹೂಡಿಕೆದಾರರು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಬಿಸಿನೆಸ್​ ಸೈಕಲ್​ ಇನ್ವೆಸ್ಟಿಂಗ್​ಮ್ಯೂಚುವಲ್ ಫಂಡ್‌ಗಳಿಗೆ ಆದ್ಯತೆ ನೀಡಬಹುದು. ಇದಕ್ಕೆ ಒಂದು ಉತ್ತಮ ಆಯ್ಕೆಯೆಂದರೆ ICICI ಪ್ರುಡೆನ್ಶಿಯಲ್ ಬಿಸಿನೆಸ್ ಸೈಕಲ್ ಫಂಡ್. ಇದು ಹೂಡಿಕೆದಾರರಿಗೆ ನಿರಂತರವಾಗಿ ಉತ್ತಮ ಅನುಭವವನ್ನು ನೀಡುತ್ತಿದೆ. ಕಳೆದ 3 ವರ್ಷಗಳಲ್ಲಿ ಶೇ. 21.66 ರಷ್ಟು CAGR ಮತ್ತು 2021, ಜನವರಿಯಿಂದ ಪ್ರಾರಂಭವಾದಾಗಿನಿಂದ ನವೆಂಬರ್ 28, 2025 ರವರೆಗೆ ಶೇ. 21.58 ರಷ್ಟು CAGR ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net