ಖಾನಾಪುರ: ಚಲಿಸುತ್ತಿದ್ದ ವೇಳೆ ಸ್ಟೀರಿಂಗ್ ಲಾಕ್ ಆಗಿ ಹಳಿಯಾಳನಿಂದ ಖಾನಾಪುರ ಕಡೆಗೆ ಬರುತ್ತಿದ್ದ ಹಳಿಯಾಳ-ಬೆಳಗಾವಿ ಬಸ್ ತಾಲೂಕಿನ ಬೆಕವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ಸಂಜೆ ನಡೆದಿದೆ.
ಯಾವುದೇ ಪ್ರಾಣ ಹಾನಿಯಾಗಿಲ್ಲ. ಬಸ್ಸಿನಲ್ಲಿ 15 ಪ್ರಯಾಣಿಕರಿದ್ದರು. ಬಸ್ಸಿನಲ್ಲಿದ್ದ ಮೂವರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಳುಗಳಿಗೆ ಬೀಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾನಾಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.