ಕಕ್ಕೇರಾ ಮಾರ್ಗದಿಂದ ವಿಜಯಪುರಕ್ಕೆ ಬಸ್​

ಕಕ್ಕೇರಾ ಮಾರ್ಗವಾಗಿ ರಾಯಚೂರು&ವಿಜಯಪುರ ಹೊಸ ಮಾರ್ಗದ ಬಸ್​ ಕಕ್ಕೇರಾ ಪಟ್ಟಣಕ್ಕೆ ಬರುತ್ತಿದ್ದಂತೆ ಪಟ್ಟಣದ ಸಾಮೂಹಿಕ ಸಂಟನೆಗಳ ಪದಾಧಿಕಾರಿಗಳು, ಚಾಲಕ ಮತ್ತು ನಿರ್ವಾಹಕ ಅವರನ್ನು ಸನ್ಮಾನಿಸಿದರು. ಅಯ್ಯಣ್ಣ ಪೂಜಾರಿ, ರಮೇಶ ಶೆಟ್ಟಿ, ಬಸಣ್ಣ ದೇಸಾಯಿ,್ಣ ಅಯೂಬ್​, ಸಂಗಣ್ಣ ಕುರಿ, ಮುದ್ದಣ್ಣ, ಬುಚ್ಚಪ್ಪ, ಅಮರಪ್ಪ ಮಂಡಿ ಇತರರಿದ್ದರು.
ಕಕ್ಕೇರಾ ಮಾರ್ಗವಾಗಿ ರಾಯಚೂರು&ವಿಜಯಪುರ ಹೊಸ ಮಾರ್ಗದ ಬಸ್​ ಕಕ್ಕೇರಾ ಪಟ್ಟಣಕ್ಕೆ ಬರುತ್ತಿದ್ದಂತೆ ಪಟ್ಟಣದ ಸಾಮೂಹಿಕ ಸಂಟನೆಗಳ ಪದಾಧಿಕಾರಿಗಳು, ಚಾಲಕ ಮತ್ತು ನಿರ್ವಾಹಕ ಅವರನ್ನು ಸನ್ಮಾನಿಸಿದರು. ಅಯ್ಯಣ್ಣ ಪೂಜಾರಿ, ರಮೇಶ ಶೆಟ್ಟಿ, ಬಸಣ್ಣ ದೇಸಾಯಿ,್ಣ ಅಯೂಬ್​, ಸಂಗಣ್ಣ ಕುರಿ, ಮುದ್ದಣ್ಣ, ಬುಚ್ಚಪ್ಪ, ಅಮರಪ್ಪ ಮಂಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘಟನೆಗಳ ಮನವಿಯಿಂದ ಮತ್ತೆ ಮರು ಸಂಚಾರ ಆರಂಭ
  • ಚಾಲಕ ನಿರ್ವಾಹಕರಿಗೆ ಸನ್ಮಾನ
ಕಕ್ಕೇರಾ: ರಾಯಚೂರುದಿಂದ ಕಕ್ಕೇರಾ ಮಾರ್ಗವಾಗಿ ವಿಜಯಪುರಗೆ ಸಂಚರಿಸಲು ಹೊಸ ಮಾರ್ಗದ ಬಸ್​ ಸೋಮವಾರ ಪಟ್ಟಣಕ್ಕೆ ಬರುತ್ತಿದ್ದಂತೆ ಪಟ್ಟಣದ ನಾಗರೀಕರು, ಸಂಘಟನೆಗಳು ಪದಾಧಿಕಾರಿಗಳು, ರೈತರು ಬರಮಾಡಿಕೊಂಡು ಚಾಲಕ ಮತ್ತು ನಿರ್ವಾಹ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮುದ್ದಣ್ಣ ಅಮ್ಮಾಪುರ ಮಾತನಾಡಿ, ಇದೇ ಮಾರ್ಗದ ಈ ಬಸ್​ ಹಲವು ವರ್ಷಗಳಿಂದ ಸಂಚರಿಸದೆ ರದ್ದುಗೊಳಿಸಲಾಗಿತ್ತು. ಹಲವು ಸಂಟನೆಗಳು ಸಂಬಂಧಿಸಿದ ಡಿಪೋ ವ್ಯವಸ್ಥಾಪಕರನ್ನು ಖುದ್ದಾಗಿ ಭೇಟಿ ನೀಡಿ ಬಸ್​ ಸಂಚಾರಕ್ಕೆ ಒತ್ತಾಯಿಸಿದ ಪರಿಣಾಮ ಇಂದು ಮರು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ನಾಗರೀಕರಿಗೆ ಪ್ರಮುಖ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಉದ್ಯಮಿ ರಮೇಶ ಶೆಟ್ಟಿ ಮಾತನಾಡಿದರು. ರಾಯಚೂರುನಿಂದ ಬೆಳಗ್ಗೆ 11.30ಕ್ಕೆ ಹೊರಟು ಕಕ್ಕೇರಾಗೆ ಮಧ್ಯಾಹ್ನ 2ಕ್ಕೆ ಆಗಮಿಸಿ ಇಲ್ಲಿಂದ ಹುಣಸಗಿ, ಕೆಂಭಾವಿ, ಸಿಂದಗಿ, ಯಂಕಂಚಿ ಮಾರ್ಗವಾಗಿ ವಿಜಯಪುರಕ್ಕೆ ಸಂಜೆ 5ಕ್ಕೆ ತಲುಪಲಿದೆ. ಮತ್ತೆ ಅದೇ ಮಾರ್ಗವಾಗಿ ಸಂಜೆ 6ಕ್ಕೆ ವಿಜಯಪುರದಿಂದ ಹೊರಟು, ಕಕ್ಕೇರಾಕ್ಕೆ ರಾತ್ರಿ 8.30ಕ್ಕೆ ಆಗಮಿಸಿ, 11ಕ್ಕೆ ರಾಯಚೂರು ತಲುಪಲಿದೆ.
ಈ ವೇಳೆ ಅಯ್ಯಣ್ಣ ಪೂಜಾರಿ, ಸುನೀಲ ಶೆಟ್ಟಿ, ಅಯೂಬ್​, ಸಂಗಣ್ಣ ಕುರಿ, ಅಮರಪ್ಪ ಮಂಡಿ, ತಿಪ್ಪಣ್ಣ ಜಂಪಾ, ಮುದ್ದಣ್ಣ ಅಮ್ಮಾಪೂರ, ಚಂದ್ರು ವಜ್ಜಲ್​, ಬುಚ್ಚಪ್ಪ ಗುರಿಕಾರ, ಮುತ್ತಣ್ಣ ಕುರಿ, ವೆಂಕಟೇಶ ದೊರೆ, ಅಮರೇಶ ಬೋಯಿ, ಬಸವರಾಜ, ಗೈಯ್ಯಪ್ಪ, ರಾವೇಂದ್ರ, ಷರೀಪಸಾಬ್​, ಮಹಿಬೂಬ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net