ಈಚಲುಮರ ಹತ್ತುವ ಪೂಜಾರಿ ಸ್ವಾಮಿ ನಿರಾಯಾಸವಾಗಿ ಕಡಿದಾದ ಗಟ್ಟಿ ಮುಳ್ಳುಗಳಿಂದ ಕೂಡಿರುವ ಮರ ಹತ್ತುವುದು ಇಲ್ಲಿನ ವಿಶೇಷ, ಈ ಹಿನ್ನೆಲೆಯಲ್ಲಿ ಪೂಜಾರಿ ಸ್ವಾಮಿ ಯುಗಾದಿ ಹಬ್ಬದ ನಂತರ ತಮ್ಮ ಮನೆಗೆ ಹೋಗುವಂತಿಲ್ಲ. ಊಟ. ತಿಂಡಿ. ಎಲ್ಲವೂ ಇವರು ಉಳಿದುಕೊಳ್ಳುವ ದೇವಸ್ಥಾನಕ್ಕೆ ಸರಬರಾಜು ಆಗುತ್ತೆ. ಜಾತ್ರೆ ಸಂದರ್ಭ ಈಚಲು ಮರ ಹತ್ತಿ, ಕೆಳಕ್ಕೆ ಇಳಿದ ನಂತರವಷ್ಟೇ ಇವರು ತಮ್ಮ ಮನೆಗೆ ತೆರಳುವುದು ಇಲ್ಲಿ ನಡೆದುಬಂದಿರುವ ವಾಡಿಕೆಯಾಗಿದೆ.