ಅಗರಿ ಹಬ್ಬಗಳ ಉತ್ಸವ: 'ವಿಜಯವಾಣಿ' ವಿಜಯೋತ್ಸವ ವಿಜೇತರಿಗೆ ಬಂಪರ್ ಕಾರು ಬಹುಮಾನ ವಿತರಣೆ

ವಿಜಯವಾಣಿ ವಿಜಯೋತ್ಸವ ಬಂಪರ್ ಬಹುಮಾನ ವಿಜೇತರು
ವಿಜಯವಾಣಿ ವಿಜಯೋತ್ಸವ ಬಂಪರ್ ಬಹುಮಾನ ವಿಜೇತರು
Published on
ಮಂಗಳೂರು: ಮೂಡುಬಿದಿರೆಯ ಪ್ರೆಸ್ಟೀಜ್ ಟವರ್‌ನ ಶಾಖೆಯಲ್ಲಿ ನಡೆದ ಅಗರಿ ಎಂಟರ್ಪ್ರೈಸಸ್ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್​ ವತಿಯಿಂದ ಆಯೋಜಿಸಿದ ಅಗರಿ ಹಬ್ಬ ಹಬ್ಬಗಳ ಉತ್ಸವ ಬಹುಮಾನ ವಿತರಣೆ ಸಮಾರಂಭದಲ್ಲಿ ವಿಜಯವಾಣಿ ದಿನಪತ್ರಿಕೆ ಆಯೋಜಿಸಿದ ವಿಜಯೋತ್ಸವದ ವಿಜೇತರಿಗೆ ಕಾರು ಬಹುಮಾನ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಧರ್ಮದರ್ಶಿ ಜೀವಂದರ್ ಕುಮಾರ್, ವಿಜಯವಾಣಿ ಮಂಗಳೂರು ಸಹಾಯಕ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂತೋಷ್ ಬಂಗೇರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಜಯವಾಣಿ ಪತ್ರಿಕೆ ವಿಜಯೋತ್ಸವದಲ್ಲಿ ಅಗರಿ ಸಂಸ್ಥೆಯ ಗ್ರಾಹಕರಿಗೆ ಕಾರು ಸಹಿತ ವಿವಿಧ ಬಹುಮಾನಗಳು ಬರುತ್ತಿರುವುದು ಸಂಸ್ಥೆಗೆ ಹೆಮ್ಮೆ ಎಂದು ಅಗರಿ ಸಂಸ್ಥೆಯ ಮಾಲಕ ಅಗರಿ ರಾಘವೇಂದ್ರ ರಾವ್ ಹೇಳಿದರು.

ವಿಜಯೋತ್ಸವ ವಿಜೇತರಿಗೆ ಕ್ವಿಡ್ ಕಾರು 

ವಿಜಯವಾಣಿ ವಿಜಯೋತ್ಸವ ಯೋಜನೆಯ ಬಂಪರ್ ಬಹುಮಾನ ಗೆದ್ದ ಸೂರಜ್ ಶೆಟ್ಟಿ ವಾಲ್ಪಾಡಿ ಅವರಿಗೆ ರೆನಾಲ್ಟ್ ಕ್ವಿಡ್ ಕಾರು ಅನ್ನು  ಹಸ್ತಾಂತರಿಸಲಾಯಿತು. ವಿಜಯೋತ್ಸವದ ಇತರ ವಿಜೇತರಾದ ಅಜಯ್ ಆಚಾರ್ಯ, ಯಶವಂತಿ ಪೊಳಲಿ, ರೇಖಾ ಬೋರುಗುಡ್ಡೆ, ಜೋಹಾರ ಮೂಡುಬಿದಿರೆ, ಲಕ್ಷ್ಮಣ್ ಗುರುಪುರ ಅವರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net