ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜವನ್ನು ತಿದ್ದುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತಿದ್ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.
ವಕ್ಕಲೇರಿ ಹೋಬಳಿ ಚಿನ್ನಾಪುರದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಮಾತನಾಡಿ, ನಾಟಕದ ಉದ್ದೇಶ ಕೇವಲ ಉಪದೇಶ ನೀಡುವುದಲ್ಲ, ಪ್ರೇಕರು ಅದರ ಸಂದೇಶ ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಸಾಂಸತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಿದರೆ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೆಮ್ಮದಿ ನೆಲೆಸುತ್ತದೆ. ವೇದಿಕೆಯಲ್ಲಿ ಪ್ರದರ್ಶನಗೊಳ್ಳುವ ಪಾತ್ರಗಳು ಧಾರ್ಮಿಕ, ಸಾಂಸತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಸಾರುವಂತಿರಬೇಕು. ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು. ಚುನಾವಣೆಗಳಲ್ಲಿ ಸೋಲು&ಗೆಲುವು ಸಹಜ ಎಂದರು.
ರಾಜ್ಯ ಒಕ್ಕಲಿಗ ಸಂದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ, ಸಮಾಜದಲ್ಲಿ ಎಲ್ಲಿ ಸತ್ಯ ಮತ್ತು ಧರ್ಮ ಇರುತ್ತದೋ ಅಂತಹ ಕಡೆಯ ಶನಿಮಹಾತ್ಮನ ಅನುಗ್ರಹವೂ ಇರುತ್ತದೆ. ನಾವು ಯಾವತ್ತೂ ಧರ್ಮದ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬರುತ್ತದೆ. ಪ್ರತಿ ಗ್ರಾಮಗಳಲ್ಲಿ ಇಂತಹ ನಾಟಕೋತ್ಸವಗಳು ನಡೆದಾಗ ಪ್ರತಿಯೊಬ್ಬರೂ ಸೌಹಾರ್ದತೆ ನೆಲಸಲು ಸಾಧ್ಯ ಎಂದರು.
ಎಲ್.ಜಿ ಫೌಂಡೇಷನ್ ಅಧ್ಯ ದೊಡ್ಡವಲ್ಲಬ್ಬಿ ಲ್ಮಣಗೌಡ ಮಾತನಾಡಿ, ನಾಟಕದಲ್ಲಿ ಸಣ್ಣದ್ದು ದೊಡ್ಡದು ಎಂಬ ಪಾತ್ರ ಇರುವುದಿಲ್ಲ. ಪ್ರತಿಯೊಬ್ಬ ಕಲಾವಿದನ ಪಾತ್ರವೂ ಮಹತ್ವವಾಗುತ್ತದೆ. ನಾನು ಎಂಬ ಅಹಂಕಾರ ಬಿಟ್ಟು ಸಮಾಜಕ್ಕೆ ಒಳಿತು ಬಯಸಬೇಕು. ಸಮಾಜದಲ್ಲಿ ಅರಿವು ಮೂಡಿಸುವ ನಾಟಕಗಳು ಪ್ರದರ್ಶನವಾಗಬೇಕು. ನಮ್ಮ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.