ಮಾನ್ವಿ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಧಕ್ಕೆಯಾಗದಂತೆ ರಸ್ತೆ ನಿರ್ಮಾಣ ಮಾಡುವಂತೆ ಭಕ್ತರು ಸೋಮವಾರ ಒತ್ತಾಯಿಸಿದರು. ಪ್ರಮುಖರಾದ ಮೃತ್ಯುಂಜಯ, ಜಿ. ನಾಗರಾಜ, ವಿಶಾಲ್ ಇತರರಿದ್ದರು.
ಮಾನ್ವಿಯಲ್ಲಿ ಮಹಾಲಕ್ಷ್ಮೀ ದೇವಸ್ಥಾನ ಸಮಿತಿ ಸದಸ್ಯರ ಆಗ್ರಹ
ಮಾನ್ವಿ: ರಾಜ್ಯ ಹೆದ್ದಾರಿ ಮುಖ್ಯರಸ್ತೆ ನಿರ್ಮಾಣ ಕಾಮಗಾರಿ ಪಟ್ಟಣದಲ್ಲಿ ಆರಂಭವಾಗಿದ್ದು, ಅಂಬೇಡ್ಕರ್ ವೃತ್ತದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಯಾವುದೇ ಧಕ್ಕೆಯಾಗಬಾರದು ಎಂದು ದೇವಸ್ಥಾನ ಸಮಿತಿ ಸದಸ್ಯರು ಆಗ್ರಹಿಸಿದರು.
ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು, ರಸ್ತೆ ನಿರ್ಮಾಣಕ್ಕಾಗಿ ಗಡಿ ಗುರುತಿಸುವುದಕ್ಕೆ ಆಗಮಿಸಿದ ರಸ್ತೆ ನಿರ್ಮಾಣ ಸಂಸ್ಥೆಯ ಅಧಿಕಾರಿ ವಿಶಾಲ್‌ಗೆ ಮಹಾಲಕ್ಷ್ಮೀ ದೇವಸ್ಥಾನ ಕೆಡವದಂತೆ ಹಾಗೂ ದೇವಸ್ಥಾನ ಬಿಟ್ಟು ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಅಧಿಕಾರಿ ವಿಶಾಲ್ ಮಾತನಾಡಿ, ದೇವಸ್ಥಾನಕ್ಕೆ ಹೆಚ್ಚಿನ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದೇವಸ್ಥಾನದ ಸಮಿತಿ ಸದಸ್ಯರಾದ ಜಿ. ನಾಗರಾಜ, ಗಣೇಕಲ್ ಮಲ್ಲನಗೌಡ, ಜಿ.ಸುಧಾಕರ, ಭಕ್ತರು ಇದ್ದರು.