ಬೆಂವಿವಿ ಯುಜಿಐಟಿ ಅಂತರಾಷ್ಟ್ರೀಯ ಸಮ್ಮೇಳನ; ಭೂಗೋಳ ವಿಜ್ಞಾನ ಕ್ಷೇತ್ರದ ತಂತ್ರಜ್ಞಾನ ಗೋಷ್ಠಿ

ಭೂಗೋಳಶಾಸದ ಹೆಚ್ಚಿನ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕೆ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಕುಲಪತಿ ಡಾ.ಎಸ್.ಎಂ. ಜಯಕರ, ಕುಲಸಚಿವೆ ಕೆ.ಟಿ. ಶಾಂತಲಾ, ಡಾ.ಬಿ.ಎಸ್.ದಯಾಸಾಗರ್, ಡಾ.ರಾಜೇಶ್ ಮತ್ತಿತರರಿದ್ದರು.
ಭೂಗೋಳಶಾಸದ ಹೆಚ್ಚಿನ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕೆ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಕುಲಪತಿ ಡಾ.ಎಸ್.ಎಂ. ಜಯಕರ, ಕುಲಸಚಿವೆ ಕೆ.ಟಿ. ಶಾಂತಲಾ, ಡಾ.ಬಿ.ಎಸ್.ದಯಾಸಾಗರ್, ಡಾ.ರಾಜೇಶ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂವಿವಿ ಯುಜಿಐಟಿ ಅಂತರಾಷ್ಟ್ರೀಯ ಸಮ್ಮೇಳನ
  • ಭೂಗೋಳ ವಿಜ್ಞಾನ ಕ್ಷೇತ್ರದ ತಂತ್ರಜ್ಞಾನ ಗೋಷ್ಠಿ

ಬೆಂಗಳೂರು:ಹವಾಮಾನಬದಲಾವಣೆ,ಪರಿಸರಅಸ್ಥಿರತೆ ಕುರಿತು ವೈಜ್ಞಾನಿಕಅಧ್ಯಯನ ನಡೆಸುವುದು ಮಾನವ ಕುಲದಸುರಕ್ಷತೆ ಮತ್ತು ಪ್ರಗತಿಗೆಅತ್ಯಾವಶ್ಯಕವಾಗಿದೆ ಎಂದುಸಿಎಸ್‌ಐಆರ್ ನಿರ್ದೇಶಕ ಡಾ.ಗೋಪಾಲಕೃಷ್ಣಪಾತ್ರ ಅಭಿಪ್ರಾಯಿಸಿದ್ದಾರೆ.

ಬೆಂಗಳೂರುವಿಶ್ವವಿದ್ಯಾಲಯದ ಭೂಗೋಳಶಾಸ್ತ್ರವಿಭಾಗದ ವತಿಯಿಂದ ಆಯೋಜಿಸಿದ್ದಜಿಯೋ ವಿಷನ್ 2025ಹವಾಮಾನ ಕ್ರಮ,ವಿಪತ್ತುಸ್ಥಿತಿಸ್ಥಾಪಕತ್ವ ಮತ್ತು ಪರಿಸರಸುಸ್ಥಿರತೆಗಾಗಿ ಭೂವ್ರೋಮನಾವೀನ್ಯತೆ ಎಂಬ ವಿಚಾರದ ಕುರಿತುಆಯೋಜಿಸಿದ್ದ 14ನೇಯುಜಿಐಟಿ ಅಂತರರಾಷ್ಟ್ರೀಯಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿಭಾಗವಹಿಸಿ ಮಾತನಾಡಿದರು.ಭೂಕಂಪ,ಪ್ರಾಕೃತಿಕವಿಕೋಪಗಳನ್ನು ನಿಖರವಾಗಿ ಊಹಿಸಲುಸಾಧ್ಯವಿಲ್ಲ ಆದರೆ ಜಿಪಿಎಸ್,ಎಐ ಸೇರಿದಂತೆಜಿಯೋಸ್ಪೆಷಿಯಲ್ ಪರಿಕರಗಳಿಂದಭೂಮಿಯ ಒಳ ಮತ್ತು ಹೊರಪದರದಚಲನೆಗಳನ್ನು ಸೂಕ್ಷ್ಮವಾಗಿಅಧ್ಯಯನ ನಡೆಸಲು ಸಾಧ್ಯ.ಭೂಕಂಪ ವಲಯ,ದುರ್ಬಲ ಪ್ರದೇಶಗಳನ್ನುಗುರುತಿಸಿ ವಿಪತ್ತು ನಿರ್ವಹಣೆಮತ್ತು ವಿಪತ್ತಿನ ತೀವ್ರತೆಯನ್ನುಕಡಿಮೆ ಮಾಡಲು ಜಿಯೋ ಉಪಕರಣಗಳುಸಹಾಯಕವಾಗಿದೆ.ಇಂತಹ ಅಂತರಾಷ್ಟ್ರೀಯವೇದಿಕೆಯಲ್ಲಿ ವೈಜ್ಞಾನಿಕಮೌಲ್ಯಮಾಪನ ಭೂವ್ರೋಮ ವಿಶ್ಲೇಷಣೆಮಾಡುವ ಅಗತ್ಯತೆ ಬಗ್ಗೆ ತಿಳಿಸಿದರು.

ಭೂಗೋಳಶಾಸ್ತ್ರವಿಭಾಗದ ಮುಖ್ಯಸ್ಥ ಪ್ರೊ.ಅಶೋಕಡಿ ಹಂಜಗಿ ಮಾತನಾಡಿ,ಹವಾಮಾನ ಬದಲಾವಣೆ,ಪರಿಸರ ಅವನತಿ,ತ್ವರಿತ ನಗರೀಕರಣಮತ್ತು ನೈಸರ್ಗಿಕ ವಿಕೋಪಗಳಸವಾಲುಗಳನ್ನು ಎದುರಿಸಲು ವಿಪತ್ತುಸ್ಥಿತಿಸ್ಥಾಪಕತ್ವ,ಪರಿಸರ ಸುಸ್ಥಿರತೆಗಾಗಿಭೂವ್ರೋಮ ನಾವೀನ್ಯತೆ ಕಲ್ಪಿಸಲಾಗಿದೆ.ವಿದ್ಯಾರ್ಥಿಗಳಿಗೆಮತ್ತು ಭೂಗೋಳ ತಜ್ಞರು ಹೊಸತಲೆಮಾರಿನತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕುಎಂದರು.

ಸಮ್ಮೇಳನದಲ್ಲಿದೇಶ ವಿದೇಶಗಳ 300ಕ್ಕೂಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭೂಗೋಳಶಾಸತಜ್ಞರಾದ ಪ್ರೊ.ಬಿ.ನಾಗೇಶ್,ಡಾ.ಎನ್.ಎಲ್.ರಾಜೇಶ್,ಡಾ.ವಿ.ರಾಕೇಶ್ ಅವರಿಗೆಯುಜಿಐಟಿ ಎಕ್ಸಲೆನ್ಸ್ ಅವಾರ್ಡ್ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿಕುಲಪತಿ ಡಾ.ಎಸ್.ಎಂ.ಜಯಕರ,ಕುಲಸಚಿವೆ ಕೆ.ಟಿ.ಶಾಂತಲಾ,ಭಾರತೀಯ ಸಂಖ್ಯಾಶಾಸಸಂಸ್ಥೆ ನಿರ್ದೇಶಕ ಡಾ.ಬಿ.ಎಸ್.ದಯಾಸಾಗರ್,ಕೆಎಸ್‌ಆರ್‌ಎಸ್‌ಎಸಿನಿರ್ದೇಶಕ ಡಾ.ರಾಜೇಶ್ಉಪಸ್ಥಿತರಿದ್ದರು.

ದೂರಸಂವೇದಿಅನ್ವಯಿಕೆ ಕೇಂದ್ರದೊಂದಿಗೆಒಡಂಬಡಿಕೆ

ಸಂಶೋಧನಾಗುಣಮಟ್ಟ ಹೆಚ್ಚಿಸಿ,ಶೈಕ್ಷಣಿಕ ಅಧ್ಯಯನವೃದ್ದಿಸುವ ನಿಟ್ಟಿನಲ್ಲಿಬೆಂಗಳೂರು ವಿಶ್ವವಿದ್ಯಾಲಯವುಮತ್ತು ಕರ್ನಾಟಕ ರಾಜ್ಯ ದೂರಸಂವೇದಿಅನ್ವಯಿಕೆ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು.ಈ ಒಡಂಬಡಿಕೆಭಾಗವಾಗಿ ಶೈಕ್ಷಣಿಕ-ಸಂಶೋಧನಾಸಹಯೋಗ, ಜಂಟಿಸಂಶೋಧನಾ ಕಾರ್ಯಕ್ರಮ,ಕಾರ್ಯಗಾರಆಯೋಜನೆ, ಸಾಮರ್ಥ್ಯವೃದ್ಧಿ, ದತ್ತಾಂಶಹಂಚಿಕೆ ಮತ್ತು ಭೌಗೋಳಿಕ ತಂತ್ರಜ್ಞಾನಗಳಅನ್ವಯವನ್ನು ಬಲಪಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net