ಬಿಎಸ್ ವೈ ಅಭಿಮಾನೋತ್ಸವ ಬಿಜೆಪಿ ಪಕ್ಷದ ಕಾರ್ಯಕ್ರಮ, ನಾನು ಏನು ಪ್ರತಿಕ್ರಿಯಿಸಲಿ- ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Published on
ಕಲಬುರಗಿ: ಬಿ.ಎಸ್ ಯಡಿಯೂರಪ್ಪ ಅವರ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮ ಆ ಬಗ್ಗೆ ನಾವೇನು ಹೇಳಬೇಕು,? ಪ್ರಚಾರಕ್ಕಾಗಿ ಏರ್ಪಡಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಕಲಬುರಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಈ ಸಮಾರಂಭಕ್ಕೆ ಬಿಜೆಪಿ ಒಳಗಿನ ಕೆಲವರು ಅಪಸ್ವರ ಎತ್ತಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಹಲವಾರು ಆರೋಪಗಳಿವೆ. ಇಂತ ಸಂದರ್ಭದಲ್ಲಿ ಅವರ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಔಚಿತ್ಯ ಏನು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಪ್ರಚಾರಕ್ಕಾಗಿ‌ ಏನಾದರೂ ಹೇಳುತ್ತಲೇ ಇರುತ್ತಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆ‌ ಇದೆ. ಈ ಬಗ್ಗೆ ಬಿಜೆಪಿಯ‌ ಶಾಸಕರು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಬಿಜೆಪಿ‌ ನಾಯಕರು ಉತ್ತರ ನೀಡಲಿ ಎಂದರು.
ತಮಿಳುನಾಡಲ್ಲಿ ಬಿಜೆಪಿ ಗೆದ್ದಿರೋದೆ ಒಂದು ಸ್ಥಾನ? ಈ ಬಗ್ಗೆ ವಿರೋಧ ಪಕ್ಷದ‌ ನಾಯಕ ನಾರಾಯಣಸ್ವಾಮಿ ಉತ್ತರಿಸಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಧಿಕಾರಕ್ಕಾಗಿ ಕಾಂಗ್ರೆಸ್ ನವರು ತಮಿಳುನಾಡಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದೆ ಎನ್ನುವ ನಾರಾಯಣಸ್ವಾಮಿ ಹೇಳಿಕೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿಯವರು ಸಂವಿಧಾನವನ್ನು ಕಗ್ಗೊಲೆ ಮಾಡಿದ್ದಾರೆ. ಪಾರದರ್ಶಕ ಚುನಾವಣೆ ನಡೆದರೆ ಬಿಜೆಪಿ ಯಾವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಅಷ್ಟೇಕೆ ವಿರೋಧ ಪಕ್ಷದ ನಾಯಕ‌ ಆರ್. ಅಶೋಕ್ ಕೂಡಾ ಗೆಲ್ಲುವುದಿಲ್ಲ ಎಂದು ಹರಿಹಾಯ್ದ ಸಚಿವರು ಮುಖ್ಯ ಚುನಾವಣೆ ನೇಮಕ ಮೋದಿ ಹೇಳಿದಂತೆ ಆಗುತ್ತದೆ. ಚುನಾವಣೆ ಆಯೋಗ, ಇಡಿ, ಸಿಬಿಐ ಮುಂತಾದವರನ್ನು ದೂರವಿಟ್ಟು‌ ಬಿಜೆಪಿ ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿದರು.
ಎಂ ಎಲ್ ಎ ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿದಂತೆ ಇತರರು ಇದ್ದರು.
ರಾಜ್ಯಪಾಲರು ಬಿಜೆಪಿ ಕೈಗೊಂಬೆಗಳಂತೆ ವರ್ತನೆ
ಗವರ್ನರ್ ಗಳು ಬಿಜೆಪಿ‌ ಕೈಗೊಂಬೆಯಂತಾಗಿದ್ದಾರೆ ಎಂದು ಖಡಕ್ ಆಗಿ ಹೇಳಿದ ಸಚಿವರು ರಾಜ್ಯದಲ್ಲಿ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯಪಾಲವರು ವಾಪಸ್ ಕಳಿಸುತ್ತಾರೆ. ತಮಿಳುನಾಡಲ್ಲಿ ಬಹುಮತ ಸಾಬೀತಿಗೆ ಫ್ಲೋರ್ ಟೆಸ್ಸ್ ಮಾಡಲಿ ಅದು ಗವರ್ನರ್ ಮುಂದೆ ಅಲ್ಲ ಎಂದು ಪ್ರತಿಕ್ರಿಯಿಸಿದರು.
ತಮಿಳು‌ನಾಡಲ್ಲಿ ಕಾಂಗ್ರೆಸ್ ಡಿಎಂಕೆ ಗೆ ಬೆನ್ನಿಗೆ ಚೂರಿ‌ಹಾಕಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು ಸ್ಥಳೀಯ ನಾಯಕರ ಅಭಿಪ್ರಾಯ ಹಾಗೂ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಟಿವಿಕೆಗೆ ಬೆಂಬಲ ನೀಡಲಾಗಿದೆ ಎಂದು ಅವರು ಕಾಂಗ್ರೆಸ್ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕುಡಿಯುವ ನೀರು‌ ಒದಗಿಸಲು ಗ್ರಾಮ ಪಂಚಾಯತ ಬಳಿ‌ ಹಣವಿಲ್ಲ ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಜಿಲ್ಲೆಯಲ್ಲಿ 25 ಹಳ್ಳಿಗಳಲ್ಲಿ‌ಸಮಸ್ಯೆ 21 ಬೋರ್ ವೆಲ್ ಬಾಡಿಗೆ ತೆಗೆದಿಕೊಂಡು ನೀರು ಒದಗಿಸಲಾಗುತ್ತಿದೆ ಹಾಗು ಮಿಕ್ಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತಿದೆ ಎಂದು ಶಾಸಕ ಬಿ. ಆರ್. ಪಾಟೀಲ್ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಂಪುಟ ವಿಸ್ತರಣೆ ಹೈಕಮಾಂಡ್ ತೀರ್ಮಾನಿಸುತ್ತದೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ‌ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಪಕ್ಷದ ಹೈಕಮಾಂಡ್, ಮಲ್ಲಿಕಾರ್ಜುನ ಖರ್ಗೆ, ಸಿಎಂ ಹಾಗೂ‌ ಡಿಸಿಎಂ ಅವರು ಚರ್ಚಿಸಿ ಅವರು ನಿರ್ಧಾರ‌ ತೆಗೆದುಕೊಳ್ಳುತ್ತಾರೆ ಎಂದರು.
ಸಿಯುಕೆ‌ ಸಂಘಪರಿವಾರದ ಶಾಖೆಯಂತಾಗಿದೆ ಎಂದು ಹರಿಹಾಯ್ದ ಸಚಿವರು ವಿವಿಯ ಬಗ್ಗೆ ಹಾಗೂ ಅಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.
ನರೇಗಾ ಬಗ್ಗೆ ಮೊನ್ನೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಯಾಕೆಂದರ, ವಿಬಿ-ಜಿ- ರಾಮ್ ಜಿ ಬಗ್ಗೆ ಕೇಂದ್ರಕ್ಕೆ ಸ್ಪಷ್ಟವಾದ ಪ್ರಕ್ರಿಯೆಗಳಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net