ಫ್ರೀಯಾಗಿ ಹಳೇ ಹಾಸಿಗೆ, ಸ್ಲಿಪ್ಪರ್, ಕಮೋಡ್ ವಿಲೇವಾರಿ ಮಾಡಿ; BSWMLಯಿಂದ 'DClutter' ಆ್ಯಪ್ ಜಾರಿ, ಬಳಸಿಕೊಳ್ಳೋದು ಹೇಗೆ?

DClutter
DClutter
Published on

ಪ್ರಮುಖ ಮುಖ್ಯಾಂಶಗಳು

  • ಹಳೇ ಸೋಫಾ, ಸ್ಲಿಪ್ಪರ್, ಹಾಸಿಗೆ, ಕಮೋಡ್​ಗಳನ್ನು ಸಿಕ್ಕ ಸಿಕ್ಕ ರಸ್ತೇಲಿ ಬಿಸಾಡ್ಬೇಡಿ
  • BSWMLನಿಂದ ಡಿ ಕ್ಲಟರ್​ ಎನ್ನುವ ಆಪ್​ ಜಾರಿ, ಫ್ರೀಯಾಗಿ ವಿಲೇವಾರಿ ಮಾಡಲು ಅವಕಾಶ
  • DClutter ಮೂಲಕ ಬೆಂಗಳೂರಿನ ರಸ್ತೆಯ ಅಂದ ಕಾಪಾಡಿಕೊಳ್ಳಲು ಶ್ರಮ
DClutter: ಬೆಂಗಳೂರಿನಲ್ಲಿ ಅತಿ ದೊಡ್ಡ ಸಮಸ್ಯೆಗಳು ಎಂದು ಲಿಸ್ಟ್​ ಮಾಡುತ್ತಾ.. ಕುಳಿತರೆ ಒಂದೆರಡಲ್ಲ ನೂರಾರು ಸಿಗುತ್ತದೆ. ರಸ್ತೆ ಗುಂಡಿ, ಟ್ರಾಫಿಕ್​​, ದುಬಾರಿ ಮನೆ ಬಾಡಿಗೆ, ನೀರಿನ ಸಮಸ್ಯೆ. ಇದೆಲ್ಲಕ್ಕಿಂತ ಬೃಹತ್​​ ಮುಜುಗರಕ್ಕೀಡು ಮಾಡುವಂತದ್ದು ಎಂದರೆ ಅದು, ಎಲ್ಲೆಂದರಲ್ಲಿ ಕಸ ಬಿಸಾಡುವುದು. ಇದರಿಂದ ಸಿಲಿಕಾನ್​ ಸಿಟಿ ಸೌಂದರ್ಯ ಹಾಳಾಗುತ್ತದೆ ಎಂದು ಪರಿಗಣಿಸಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಹೊಸ ತಂತ್ರವೊಂದನ್ನು ಜಾರಿ ಮಾಡಿದೆ.
ಹೌದು, ಇತ್ತೀಚೆಗೆ ಬೆಂಗಳೂರಿನ ರಸ್ತೆಯ ಗಲ್ಲಿ ಗಲ್ಲಿಯಲ್ಲೂ ಕಸ ಇರುವ ಬಗ್ಗೆ ಉದ್ಯಮಿ ಕಿರಣ್​ ಮಜುಂದಾರ್​ ಅವರು ಪೋಸ್ಟ್ ಹಂಚಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದ್ದರು. ಇಷ್ಟೆಲ್ಲ ರಾಧಾಂತಗಳ ಮಧ್ಯೆ BSWML 'DClutter' ಎನ್ನುವ ಆಪ್​ ಅನ್ನು ಜಾರಿ ಮಾಡಿದೆ. ಏನಿದು ಹೊಸ ಅಪ್ಲಿಕೇಶನ್​ ಬಳಕೆ ಮಾಡಿಕೊಳ್ಳೋದು ಹೇಗೆ, ಯಾವ ಕಸವನ್ನು ನೀಡಬೇಕು ಎಂಬುದರ ಬಗ್ಗೆ ಡಿಟೇಲ್ಸ್ ಈ ಲೇಖನದಲ್ಲಿ ಇದೆ.
ಏನಿದು 'ಡಿ ಕ್ಲಟರ್​​'​?
ಇನ್ಮುಂದೆ ಕಸದೋರು ಬಂದಿಲ್ಲ. ಆಫೀಸ್​ನಲ್ಲಿದ್ದಾಗ ಕಸದ ಟಿಪ್ಪರ್ ಲಾರಿಯವರು ಬಂದರೆ ನಾವೇನು ಮಾಡ್ಬೇಕು ಎಂದು ಸಬೂಬು ಹೇಳುವ ಹಾಗಿಲ್ಲ. ಹಾಗೆಯೇ ಬೇಡವಾದ ಗೃಹೋಪಯೋಗಿ ವಸ್ತು ಯಾರಿಗೂ ತಿಳಿಯದಂತೆ ರಸ್ತೆಯಲ್ಲಿ ಬಿಸಾಡೋದು ಬೇಡ. ಬದಲಾಗಿ BSWML ಬಿಡುಗಡೆ ಮಾಡಿರುವ 'ಡಿ ಕ್ಲಟರ್​​'​ ಎನ್ನುವ ಅಪ್ಲಿಕೇಶನ್​​ ಡೌನ್​ಲೋಡ್​ ಮಾಡಿಕೊಂಡು ಅದರ ಮೂಲಕ ವಾರಕ್ಕೊಮ್ಮೆ ಕಸವನ್ನು ಸಂಗ್ರಹಿಸುತ್ತದೆ.

ಯಾವ ಕಸ ನೀಡಬೇಕು?

ಮುರಿದ ಹಾಸಿಗೆಗಳು, ಕಬೋರ್ಡ್​​, ಪಾದರಕ್ಷೆ, ಬಟ್ಟೆ, ಬೆಡ್​, ಕಮೋಡ್, ಬೆಂಚು, ಮಕ್ಕಳ ಆಟಿಕೆ, ಸಿಂಕ್ ಎಲೆಕ್ಟ್ರಾನಿಕ್ಸ್​​ ನಲ್ಲಿಯಂತಹ ಬೃಹತ್​ ವಸ್ತುಗಳನ್ನು ನೀಡಬಹುದು. ಕೆಲವು ಹಣ ಬರುವಂತಹ ವಸ್ತುಗಳನ್ನು ಗುಜರಿ ಅಂಗಡಿಕೊಟ್ಟರೆ, ಇನ್ನು ಬೇಡವಾದ ವಸ್ತುವನ್ನು ಫುಟ್​ಪಾತ್​ ಮೇಲೆ, ಉದ್ಯಾನಗಳ ಮುಂದೆ,ರಸ್ತೆ ಬದಿ, ಖಾಲಿ ರಸ್ತೆಯಲ್ಲಿ ಸುರಿಯುತ್ತಾರೆ. ಮಳೆ ಬಂದು ತೊಯ್ದರೆ ಸುತ್ತಮುತ್ತಲಿನ ಜನರಿಗೆ, ಕಸ ತೆಗೆಯುವವರಿಗೆ ಸಮಸ್ಯೆ . ಹೀಗಾಗಗಿ ಜನರು ಬೇಜವಾಬ್ದಾರಿಯಿಂದ ವರ್ತಿಸದೆ ಡಿ ಕಲ್ಚರ್​ ಮೂಲಕ ಕಸದವರಿಗೆ ನೀಡಬಹುದು.

ಬಳಕೆ ಮಾಡೋದು ಹೇಗೆ?

ಆಂಡ್ರ್ಯಾಡ್​ ಮತ್ತು ಐಓಎಸ್​ ಫ್ಲಾಟ್​ ಫಾರ್ಮ್​ನಲ್ಲಿ ಲಭ್ಯವಿರುವ ಈ ಆ್ಯಪ್‌ ಡೌನ್​ಲೋಡ್​ ಮಾಡಿಕೊಂಡು, ನೋಂದಾಯಿಸಿ, ಲೋಕೇಶನ್​ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಂತರ ಬಿಸಾಡುವ ವಸ್ತುಗಳನ್ನುಆಯ್ಕೆ ಮಾಡಿ ನೇರವಾಗಿ ತಮ್ಮ ಮನೆಗಳಿಂದಲೇ ಅವುಗಳನ್ನು ಪಡೆದುಕೊಂಡು ಹೋಗಲು ಸಮಯವನ್ನು ನಿಗದಿ ಪಡಿಸಬಹುದು. ಆದರೆ, ಇಲ್ಲಿ ಹಸಿ ತಾಜ್ಯ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಇದು ಉಚಿತ ಪಿಕಪ್​ ಆಗಿರುತ್ತದೆ ಎನ್ನಲಾಗಿದೆ.

BSWML ಸಿಇಒ ಏನಂದ್ರು?

ನಾವು ಈ ಪದ್ಧತಿ ಜಾರಿ ಮಾಡಿದ ನಂತರ ನಮಗೆ ಸಾಕಷ್ಟು ಕರೆ ಬಂದಿದೆ. ಇದದು ಒಳ್ಳೆಯ ಕೆಲಸ ಎಂದಿದ್ದಾರೆ.ನಾವು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ. ಈ ಅಪ್ಲಿಕೇಶನ್​ ಬಳಕೆ ಮಾಡಿಕೊಳ್ಳಬೇಕು ಜನರು ಬೆಂಗಳೂರಿನ ರಸ್ತೆಗಳ ಅಂದವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು. ನಾಗರಿಕರಲ್ಲಿ ಜವಾಬ್ದಾರಿಯುತ ವಿಲೇವಾರಿ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಕಡಿಮೆಯಾಗುವುದು ಎಂದು ಭರವೆ ಇಟ್ಟುಕೊಂಡಿದ್ದೇವೆ ಎಂದು ಬಿಎಸ್‌ಡಬ್ಲ್ಯೂಎಂಎಲ್ ಸಿಇಒ ಕರಿಗೌಡ ಮಾತನಾಡಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net