ಕಟ್ಟುಪಾಡಿನಿಂದ ಹೊರಬಂದು ಆಧುನೀಕತೆ ಬೆಳೆಸಿಕೊಳ್ಳಿ Period

ಕುಣಿಗಲ್​ Period ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಋತುಸ್ರಾವ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಸುಮಾ ರಂಗನಾಥ್​ ಮಹಿಳೆಯರಿಗೆ ಮುಟ್ಟಿನ ಕಪ್​ ವಿತರಿಸಿದರು. ಶಾಸಕ ಡಾ.ರಂಗನಾಥ್​, ಡಿಎಚ್​ಒ ಡಾ.ಚಂದ್ರಶೇಖರ್​, ಟಿಎಚ್​ಒ ಡಾ.ಬಿ.ಎಚ್​.ಮರಿಯಪ್ಪ ಇದ್ದರು.
ಕುಣಿಗಲ್​ Period ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಋತುಸ್ರಾವ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಸುಮಾ ರಂಗನಾಥ್​ ಮಹಿಳೆಯರಿಗೆ ಮುಟ್ಟಿನ ಕಪ್​ ವಿತರಿಸಿದರು. ಶಾಸಕ ಡಾ.ರಂಗನಾಥ್​, ಡಿಎಚ್​ಒ ಡಾ.ಚಂದ್ರಶೇಖರ್​, ಟಿಎಚ್​ಒ ಡಾ.ಬಿ.ಎಚ್​.ಮರಿಯಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎಚ್​.ಡಿ.ರಂಗನಾಥ್​ ಹೇಳಿಕೆ
ಕುಣಿಗಲ್: ಮುಟ್ಟು ಎಂಬುದು ಮೂಢನಂಬಿಕೆಯಲ್ಲ, ಅದು ಹೆಣ್ಣಿನಲ್ಲಿ ಸ್ವಾಭಾವಿಕ ಪ್ರಕ್ರಿಯೆ. ಹೆಣ್ಣುಮಕ್ಕಳು ಕಟ್ಟುಪಾಡಿನಿಂದ ಹೊರಬಂದು, ಜೀವನದಲ್ಲಿ ಆಧುನೀಕತೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ತಿಳಿಸಿದರು.
ತಾಲೂಕಿನ ಗವಿಮಠ ಎಸ್​ವಿಬಿ ಪ್ಯಾಲೇಸ್​ನಲ್ಲಿ ಡಿಕೆಎಸ್​ ಚಾರಿಟಬಲ್​ ಟ್ರಸ್ಟ್​, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಋತುಸ್ರಾವ ಜಾಗೃತಿ ಹಾಗೂ ಮುಟ್ಟಿನ ಕಪ್​ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಟ್ಟು ಗ್ರಾಮೀಣ ಭಾಗದಲ್ಲಿ ಕಟ್ಟುಪಾಡಾಗಿದೆ. ಹೆಣ್ಣು ಮುಟ್ಟಾಗುವುದು ಪ್ರಕೃತಿಯ ನಿಯಮವಾಗದೆ. ಇದೊಂದು ಅನಿಷ್ಠವೆಂದು ಭಾವಿಸಿ ಹಳ್ಳಿಗಾಡಿನಲ್ಲಿ ಹೆಣ್ಣು ಮಕ್ಕಳನ್ನು 5&6 ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ಅಥವಾ ಮನೆಯಿಂದ ಬಹುದೂರ ಇಡಲಾಗುತ್ತಿದೆ. ಇದರಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಭೀರುತ್ತಿದೆ. ಈ ಮೂಢನಂಬಿಕೆ, ಕಂದಾಚಾರ ಹೊಗಲಾಡಿಸುವಂತ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದರು.
ತಾಲೂಕಿನಲ್ಲಿ 250 ಜನ ಮಹಿಳೆಯರು ಗರ್ಭಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಹೊಗಲಾಡಿಸುವ ದೆಸೆಯಲ್ಲಿ 14 ವರ್ಷದಿಂದ 16 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಎಚ್​ಪಿವಿ ಲಸಿಕೆ ಹಾಕಲಾಗುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ 1,300 ಜನ ಹೆಣ್ಣುಮಕ್ಕಳು ಲಸಿಕೆ ತೆಗೆದುಕೊಂಡಿದ್ದು, ಉಳಿದ ಹೆಣ್ಣುಮಕ್ಕಳು ಲಸಿಕೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಡಾ.ಸುಮಾ ರಂಗನಾಥ್​ ಮಾತನಾಡಿ, ಸಮಾಜದಲ್ಲಿ ಹೆಣ್ಣನನ್ನು ತಾರತಮ್ಯದಿಂದ ನೋಡಲಾಗುತ್ತಿದೆ. ಹೆಣ್ಣು ಸಮಾಜದಲ್ಲಿ ತಾಯಿ, ಅಕ್ಕ, ತಂಗಿ, ಹೆಂಡತಿ ಎಲ್ಲ ಸ್ಥಾನ ತುಂಬಿದ್ದಾರೆ. ಕಷ್ಟದಲ್ಲೂ ತಮ್ಮ ಆರೋಗ್ಯವನ್ನು ಸೀಮಿತವಾಗಿ ಇಟ್ಟುಕೊಂಡು ಕುಟುಂಬ ನಿರ್ವಹಣೆ ಮಾಡುತ್ತರೆ ಎಂದರು.
ನಟಿ ಮೇಘಾಶೆಟ್ಟಿ ಮಾತನಾಡಿ, ಈ ಹಿಂದೆ 16ರಿಂದ 17 ವರ್ಷದ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಆದರೆ ಈಗ 13ರಿಂದ 14 ವರ್ಷಕ್ಕೆ ಋತುಮತಿಯಾಗುತ್ತಿದ್ದಾರೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಅನುಸರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದರು.
ಡಾ.ದಿವ್ಯಾ ಮಾತನಾಡಿ, ದೇಶದಲ್ಲಿ 33 ಕೋಟಿ ಮಹಿಳೆಯರ ಪೈಕಿ 22 ಕೋಟಿ Period ಮಹಿಳೆಯರು ಪ್ಯಾಡ್​ ಬಳಸುತ್ತಿದ್ದಾರೆ. ಪ್ಯಾಡ್​ ಬಳಸುವುದರಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ಇದು ಪ್ಲಾಸ್ಟಿಕ್​ ಅಂಶವಾಗಿರುವುದರಿಂದ ಭೂಮಿಯಲ್ಲಿ ಬೇಗ ಕರಗುವುದಿಲ್ಲಾ ಇದು ಕೇವಲ ನಾಲ್ಕು ಗಂಟೆಗಳ ಕಾಲ ಬಳಸಬಹುದು. ಆದರೆ ಮುಟ್ಟಿನ ಕಪ್​ 12 ಗಂಟೆ ಕಾಲ ಬಳಸಬಹುದಾಗಿದ್ದು, ಇದು ಯಾವುದೇ ಅಡ್ಡ ಪರಿಣಾಮ ಭೀರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐದು ಸಾವಿರ ಮುಟ್ಟಿನ ಕಪ್​ ಮತ್ತು ನೀರಿನ ಪ್ಲಾಕ್​ ವಿತರಿಸಲಾಯಿತು. ಬಿಇಒ ಮಮತಾಮಣಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಭಿಜಿತ್​ ಕುಲಾಲಿ, ಡಾ.ಪಲ್ಲವಿ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಸುಮತಿ, ಆಸ್ಪತ್ರೆ ಕಮಿಟಿ ಸದಸ್ಯೆ ಬಿ.ಟಿ.ನಾಗರತ್ನಾ ಮತ್ತಿತರರು ಇದ್ದರು.
ಮಹಿಳಾ ಮೀಸಲು ಜಾರಿಯಾದ್ರೆ ಪತ್ನಿ ಸ್ಪರ್ಧೆ:
ದೇಶದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಾಬೇಕೆಂಬ ಚರ್ಚೆ ನಡೆಯುತ್ತಿದೆ, ಹಾಗೇನಾದರೂ ಒಂದು ವೇಳೆ ಶೇ.33 ಮಹಿಳಾ ಮೀಸಲಾತಿ ಬಂದು, ಕುಣಿಗಲ್​ ವಿಧಾನಸಭಾ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರವಾದರೇ ನನ್ನ ಪತ್ನಿ ಡಾ.ಸುಮಾ ಅವರು ಅಭ್ಯರ್ಥಿಯಾಗಲಿದ್ದಾರೆ. ನಿಮ್ಮಗಳ ಆಶೀರ್ವಾದ ಆಕೆ ಮೇಲೆ ಇರಬೇಕೆಂದು ಶಾಸಕರು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net