ಟ್ರಾನ್ಸಫಾರ್ಮರ್​ ಬದಲಾವಣೆ ವಿಳಂಬಕ್ಕೆ ಬ್ರೇಕ್​

ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ್​ ಮಾತನಾಡಿದರು. ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ ಪಾಟೀಲ್​, ಇಂಜಿನಿಯರ್​ಗಳು ಇದ್ದರು.
ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ್​ ಮಾತನಾಡಿದರು. ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ ಪಾಟೀಲ್​, ಇಂಜಿನಿಯರ್​ಗಳು ಇದ್ದರು.
Published on
ಕಲಬುರಗಿ: ವಿದ್ಯುತ್​ ವ್ಯತ್ಯಯ ಹಾಗೂ ಕೆಟ್ಟುಹೋದ ಟ್ರಾನ್ಸಫಾರ್ಮರ್​ಗಳ ತ್ವರಿತ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ವಿಳಂಬ ಮಾಡದೆ ಬದಲಾವಣೆ ಮಾಡಬೇಕು ಎಂದು ಜೆಸ್ಕಾಂ ಅಧ್ಯ ಪ್ರವಿಣ್​ ಪಾಟೀಲ್​ ಹರವಾಳ ಖಡಕ್​ ಸೂಚನೆ ನೀಡಿದರು.
ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಸೋಮವಾರ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಬುರಗಿ ಗ್ರಾಮೀಣ, ಆಳಂದ, ಆಫಜಲಪುರ, ಕಾಳಗಿ, ಫರಹತಾಬಾದ್​, ಹೆರೂರ್​ ಸೇರಿ ಹಲವು ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಹಾಗೂ ಟ್ರಾನ್ಸಫಾರ್ಮರ್​ ದೋಷ ಗಂಭೀರವಾಗಿದ್ದನ್ನು ಗಮನಿಸಿ, ಈ ಸಭೆ ಕರೆಯಲಾಗಿದೆ. ಕೆಟ್ಟುಹೋದ ಟ್ರಾನ್ಸಫಾರ್ಮರ್​ಗಳನ್ನು ತಣ ಬದಲಾಯಿಸಬೇಕು. ರೈತರಿಂದ ಹಣ ಪಡೆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೇಸಿಗೆ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ನೀರಿನ ಅಭಾವದಿಂದ ಬೆಳೆಗಳು ಒಣಗದಂತೆ ತಡೆಯಲು, ಟ್ರಾನ್ಸಫಾರ್ಮರ್​ ಬದಲಾವಣೆ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ರೈತರಿಗೆ ಸರ್ಕಾರದಿಂದ ವಿದ್ಯುತ್​ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ರೈತರು ಅನಧಿಕೃತವಾಗಿ ವಿದ್ಯುತ್​ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು. ಅನಧಿಕೃತ ಸಂಪರ್ಕದಿಂದ ಟ್ರಾನ್ಸಫಾರ್ಮರ್​ಗಳ ಮೇಲೆ ಹೆಚ್ಚುವರಿ ಒತ್ತಡ ಬಂದು ಪದೇ ಪದೇ ದುರಸ್ತಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜೆಸ್ಕಾಂನ ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ ಪಾಟೀಲ್​, ಮುಖ್ಯ ಹಣಕಾಸು ಅಧಿಕಾರಿ ಸೇರಿ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್​ಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net