

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ವಸಂತಪುರದಲ್ಲಿರುವಇಸ್ಕಾನ್ ದೇವಾಲಯದ ವೈಕುಂಠಹಿಲ್‌ನಲ್ಲಿ ನಾಲ್ಕು ದಿನಗಳ ಕಾಲಭವ್ಯ ಶ್ರೀ ಬ್ರಹ್ಮೋತ್ಸವಹಮ್ಮಿಕೊಳ್ಳಲಾಗಿದೆ.ಗುರುವಾರಆರಂಭವಾಗಿರುವ ಬ್ರಹ್ಮೋತ್ಸವವುಭಾನುವಾರ (ಜೂ.28ಕ್ಕೆ)ಮುಕ್ತಾಯವಾಗಲಿದೆ. ಬ್ರಹ್ಮೋತ್ಸವದಅಂಗವಾಗಿ ಪ್ರತಿದಿನ ಬೆಳಗ್ಗೆ7 ಗಂಟೆಹಾಗೂ ಸಂಜೆ 6ಗಂಟೆಯಿಂದ ವಿವಿಧಧಾರ್ಮಿಕ ಮತ್ತು ಸಾಂಸ್ಕೃತಿಕಕಾರ್ಯಕ್ರಮಗಳು ಜರುಗಲಿವೆ.
ವೆಂಕಟೇಶ್ವರಸ್ವಾಮಿಗೆ ಸಮರ್ಪಿತವಾಗಿರುವ ಈಉತ್ಸವದಲ್ಲಿ ವಿಶೇಷ ಅಭಿಷೇಕ,ಮಹಾ ಪಲ್ಲಕ್ಕಿಉತ್ಸವ, ಕಲ್ಯಾಣೋತ್ಸವಸೇರಿದಂತೆ ಹಲವು ವೈದಿಕ ಆಚರಣೆಗಳುನಡೆಯಲಿವೆ.ಭಕ್ತರಿಗೆ ದೇವರದರ್ಶನ ಹಾಗೂ ಆಶೀರ್ವಾದ ಪಡೆಯುವಅವಕಾಶ ಕಲ್ಪಿಸಲಾಗಿದೆ.
ಗುರುವಾರಧ್ವಜಾರೋಹಣದ ಮೂಲಕ ನಾಲ್ಕು ದಿನಗಳಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.ಗರುಡ ದೇವರಿಗೆವಿಶೇಷ ಅಭಿಷೇಕ ನೆರವೇರಿಸಿ,ಗರುಡ ಧ್ವಜಾರೋಹಣಮಾಡಲಾಯಿತು.ನಂತರ ಶ್ರೀ ರಾಧಾಕೃಷ್ಣರ ಉತ್ಸವ ಮೂರ್ತಿಗಳಿಗೆವಿಶೇಷ ಅಲಂಕಾರ ಮತ್ತು ಅಭಿಷೇಕನೆರವೇರಿಸಿ ಪಲ್ಲಕ್ಕಿ ಉತ್ಸವಮತ್ತು ಸಂಕೀರ್ತನೆ ಕಾರ್ಯಕ್ರಮಗಳುಜರುಗಿದವು.
ಶುಕ್ತವಾರಬೆಳಗ್ಗೆ ಶ್ರೀಲ ಪ್ರಭುಪಾದರ ಅಚಲಶಿಲಾಮೂರ್ತಿಗೆ ಮಹಾಭಿಷೇಕ,ಸಂಜೆ ಶ್ರೀರಾಜಗೋಪಾಲರುಕ್ಮಿಣಿ ಹಾಗೂ ಸತ್ಯಭಾಮಾ ದೇವಿಯರದಿವ್ಯ ಕಲ್ಯಾಣೋತ್ಸವ ನೆರವೇರಲಿದ್ದು,ಶನಿವಾರ ಗರುಡಹಾಗೂ ಹನುಮಂತರಿಗೆ ವಿಶೇಷ ಅಭಿಷೇಕ,ಪೂಜೆ,ಭಾನುವಾರ ಬೆಳಗ್ಗೆ ಎಲ್ಲ ಮೂಲ ದೇವರ ವಿಗ್ರಹಗಳಿಗೆಮಹಾಭಿಷೇಕ ಸಂಜೆ ಪಲ್ಲಕ್ಕಿಉತ್ಸವದೊಂದಿಗೆ ಬ್ರಹ್ಮೋತ್ಸವಸಮಾರೋಪಗೊಳ್ಳಲಿದೆ.ನಾಲ್ಕು ದಿನಗಳಈ ಎಲ್ಲ ಕಾರ್ಯಕ್ರಮಗಳಲ್ಲಿಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆಇಸ್ಕಾನ್ ಬೆಂಗಳೂರು ಅಧ್ಯಕ್ಷಮಧು ಪಂಡಿತದಾಸ ಆಹ್ವಾನಿಸಿದ್ದಾರೆ.