20 ನಿಮಿಷದಲ್ಲಿ ಬಾಲಕನ ಚಿತ್ರಹಿಂಸೆ ನೀಡಿ ಕೊಲೆ!

murdered-within-20-minutes
murdered-within-20-minutes
Published on

ಪ್ರಮುಖ ಮುಖ್ಯಾಂಶಗಳು

  • ವಿಡಿಯೋ ರೇಕಾರ್ಡ್ ಮಾಡಿದ್ದ ದುರುಳರು
  • ಮೊಬೈಲ್ ಎ್ಎಸ್‌ಎಲ್‌ಗೆ ರವಾನೆ
  • ತಲೆಮರೆಸಿಕೊಂಡ ಆರೋಪಿ ಪತ್ತೆಗೆ 2 ತಂಡ ರಚನೆ
ಬೆಂಗಳೂರು: ದುಡ್ಡಿನ ಆಸೆಗೆ ಪಕ್ಕದ ಮನೆಯ 13ವರ್ಷದ ಬಾಲಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದ ಕಿರಾತಕರು 20 ನಿಮಿಷದಲ್ಲಿ ಎರಡು ವಿಡಿಯೋ ಮಾಡಿಕೊಂಡು ನಂತರ ಬಾಲಕನನ್ನು ಚಿತ್ರಹಿಂಸೆ ನೀಡಿ ಹತ್ಯೆಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.
6ನೇ ತರಗತಿ ಓದುತ್ತಿದ್ದ ಪ್ರಜ್ವಲ್‌ನನ್ನು ಭಾಸ್ಕರ್ ರೆಡ್ಡಿ ಹಾಗೂ ನಾಪತ್ತೆಯಾಗಿರುವ ಮತ್ತೋರ್ವ ಆರೋಪಿ ಏಳುಕೊಂಡಲವಾಡ (30), ಒಂದು ಕೋಟಿ ರೂಪಾಯಿ ತಕ್ಷಣ ಕಳುಹಿಸಿಕೊಡುವಂತೆ ಹತ್ಯೆಗೀಡಾಗಿದ್ದ ಬಾಲಕನಿಂದ 2 ವಿಡಿಯೋ ಮಾಡಿಸಿದ್ದಾರೆ. ಅಷ್ಟಾದರೂ ಬಾಲಕ, ನೀವು ಸುಳ್ಳು ಹೇಳಿ ನನ್ನನ್ನು ಹೆದರಿಸುತ್ತಿದ್ದಿರಿ ಮಾತನಾಡಿರುವುದು ವಿಡಿಯೋದಲ್ಲಿ ರೇಕಾರ್ಡ್ ಆಗಿದೆ.
ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಕೋಟಿ ರೂ. ನೀಡಿದರೂ, ನೀಡದಿದ್ದರೂ ಈತನನ್ನು ಬಿಟ್ಟು ಕಳುಹಿಸಿದ ಮೇಲೆ ನಮ್ಮ ಹೆಸರು ಎಲ್ಲರ ಮುಂದೆ ಹೇಳುತ್ತಾನೆ ಎಂದು ಹತ್ಯೆ ಮಾಡಬೇಕೆಂದು ನಿರ್ಧರಿಸಿದ್ದರು. ನಂತರ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಾಲಕನನ್ನು ಕಟ್ಟಿಗೆಯಿಂದ ಹೊಡೆದು ನಂತರ ಸಿಮೆಂಟ್ ಇಟ್ಟಿಗೆ (ಬ್ರಿಕ್ಸ್)ನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ.
ಮೃತ ದೇಹವನ್ನು ಆಂಧ್ರಪ್ರದೇಶದಲ್ಲಿ ಯಾವುದಾದರೂ ನದಿ, ಅಥವಾ ಕಾಡಿನಲ್ಲಿ ಎಸೆದು ಹೋಗುವ ಯೋಜನೆಯನ್ನು ರೂಪಿಸಿರುವುದು ತನಿಖೆ ವೇಳೆ ಬಯಲಾಗಿದೆ.
ಆರೋಪಿ ಮೊಬೈಲ್ ವಶಕ್ಕೆ;
ಬಂಧಿತ ಭಾಸ್ಕರ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ತನಿಖೆ ಕೈಗೊಂಡ ಪೊಲೀಸರು ಹೆಚ್ಚುವರಿ ತನಿಖೆಗೆ ಮೊಬೈಲ್‌ನ್ನು ಎ್ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಇದುವರೆಗೂ ಬಾಲಕನ ತಂದೆ-ತಾಯಿ ದೂರು ನೀಡಿಲ್ಲ ಎಂದು ಚಿಕ್ಕಜಾಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಕಾರು ಅಪಘಾತವಾಗಿದ್ದ ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಎ್ಐಆರ್ ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಎರಡು ತಂಡ ರಚನೆ:
ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಈಶನ್ಯಾ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದೆ. ಒಂದು ತಂಡ ಆಂಧ್ರಪ್ರದೇಶದಲ್ಲಿ ಆರೋಪಿ ಹುಡುಕಾಟ ಮುಂದುವರೆಸಿದ್ದು, ಮತ್ತೊಂದು ತಂಡ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net