ಸಿಡಿಲು ಬಡಿದು ಬಾಲಕ ಸಾವು

Boy dies after being struck by lightning
Boy dies after being struck by lightning
Published on
ಚಿಂತಾಮಣಿ: ಮಿಂಡಿಗಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗವಗೋಳ್ಳಹಳ್ಳಿಯಲ್ಲಿ ಬುಧವಾರ ರಾತ್ರಿ ಸಿಡಿಲು ಬಾಲಕ ಮೃತಪಟ್ಟಿದ್ದಾನೆ.
ಮುನಿಯಪ್ಪ ಮತ್ತು ಮಮತಾ ದಂಪತಿಯ ಪುತ್ರ ವಿನಯ್​ (15) ಮೃತ. ರಾತ್ರಿ ಮನೆಯಲ್ಲಿ ಊಟ ಮಾಡಿ ತಟ್ಟೆ ತೊಳೆಯಲು ಮಳೆ ನಡುವೆ ಹೊರಗೆ ಬಂದಾಗ ಸಿಡಿಲು ಬಡಿದಿದೆ. ಕಿರುಚಿಕೊಂಡ ವಿನಯ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಕುಟುಂಬಸ್ಥರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.
ವಿನಯ್​ ಕೆಂಚಾರ್ಲಹಳ್ಳಿ ಬಾಪೂಜಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಯುಗಾದಿ ಸಂಭ್ರಮದಲ್ಲಿರಬೇಕಾದ ಕುಟುಂಬದಲ್ಲೀಗ ಸೂತಕದ ಛಾಯೆ ಆವರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net