ಕೊಳಚೆ ಗ್ರಾಮವಾದ ಬೋರಬಂಡಾ

ತಾಲೂಕಿನ ಬೋರಬಂಡಾ ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಎದುರು ಕೊಳಚೆ ನೀರು ನಿಂತಿರುವುದು.
ತಾಲೂಕಿನ ಬೋರಬಂಡಾ ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಎದುರು ಕೊಳಚೆ ನೀರು ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕರ ಮಾತಿಗೂ ಬೆಲೆ ನೀಡಿದ ಪಿಡಿಒ
  • ಜವಾಬ್ದಾರಿ ಮರೆತ ಅಽಕಾರಿಗಳು
  • ರೋಗದ ಭೀತಿಯಲ್ಲಿ ಮಕ್ಕಳು
ಗುರುಮಠಕಲ್ : ಮಳೆಗಾಲ ಆರಂಭವಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮಗಳಲ್ಲಿ ಮಾತ್ರ ಸ್ವಚ್ಛತೆ ಎಂಬುದು ಇನ್ನೂ ಮರಿಚಿಕೆಯಾಗಿಯೇ ಉಳಿಸಿದೆ. ಇದಕ್ಕೆ ತಾಜಾ ಉದಾಹರಣೆ ಎಂದು ಕಾಕಲವಾರ ಗ್ರಾಪಂ ವ್ಯಾಪ್ತಿಯ ಬೋರಬಂಡಾ ಗ್ರಾಮವೇ ಸಾಕ್ಷಿ.
ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಎದುರು ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಅಲ್ಲದೆ ಶೈಕ್ಷಣಿಕ ವರ್ಷ ಆರಂಭದ ವೇಳೆ ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೆಕು. ಆದರೆ ಶಾಲೆಯ ಅಡುಗೆ ಕೋಣೆಯ ಪಕ್ಕದಲ್ಲಿಯೇ ಕೊಳಚೆ ನೀರು ಕೆರೆಯಂತೆ ಸಂಗ್ರವಾಗಿದ್ದರಿAದ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಅಲ್ಲದೆ ಶಾಲೆಯ ಮುಖ್ಯ ದ್ವಾರದ ಎದುರೇ ನೀರು ನಿಲ್ಲುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ನಿತ್ಯ ಮಕ್ಕಳು ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಮನೆ ಮಾಡಿದೆ.
ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಘೆ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಳವಾಗಿದೆ. ಚಿಕ್ಕ ಮಕ್ಕಳು ಈ ನೀರಿನಲ್ಲಿ ಬಿದ್ದು ಅಪಾಯಕ್ಕೀಡಾಗುವ ಲಕ್ಷಣ ಇರುವುದರಿಂದ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವು ಬಾರಿ ಗ್ರಾಪಂ ಪಿಡಿಒಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿರುವುದರಿAದ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ಕುಡಿಯುವ ನೀರು ಸಮಸ್ಯೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಪ್ರತಿ ಬಾರಿ ಅಽಕಾರಿಗಳಿಗೆ ಸೂಚನೆ ನೀಡಿದರೂ ಕೂಡ ವ್ಯವಸ್ಥೆ ಮಾತ್ರ ಸುಧಾರಿಸುವಂತೆ ಕಾಣುತ್ತಿಲ್ಲ. ಹೀಗಾಗಿ ಇಲ್ಲಿ ಶಾಸಕರ ಮಾತಿಗೂ ಕಿಮ್ಮತ್ತು ಇಲ್ಲದಂತಾಗಿದೆ. ಹೀಗಾಗಿ ಸಂಬAಽಸಿದ ಅಽಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
"

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಮರೆಮಾಚಿದೆ. ಅಽಕಾರಿಗಳಿಗೆ ಯಾರು ಕೇಳುವವರು ಇಲ್ಲದಂತಾಗಿದೆ. ತಮ್ಮ ಜವಾಬ್ದಾರಿ ಮರೆತಿರುವ ಪಿಡಿಒಗಳಿಗೆ ಜಿಪಂ ಸಿಇಒ ಅವರು ಸೂಕ್ತ ಮಾರ್ಗದರ್ಶನ ನೀಡಿ ಗ್ರಾಮೀಣ ಪ್ರದೇಶಗಳ ಸ್ವಚ್ಛತೆ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು.| ಅಶೋಕ ಶನಿವಾರಂಸಾಮಾಜಿಕ ಕಾರ್ಯಕರ್ತ


"

ಸ್ವಚ್ಛತೆಯ ವಾಹನ ಕೆಟ್ಟಿದೆ. ೨-೩ ದಿನಗಳಲ್ಲಿ ಸರಿಯಾಗಲಿದೆ. ಶಾಲೆ ಎದುರು ಕೊಳಚೆ ನೀರು ನಿಂತಿರುವುದು ಗಮನಕ್ಕೆ ಬಂದಿದ್ದು ಒಂದೆರಡು ದಿನಗಳಲ್ಲಿ ಸ್ವಚ್ಛತೆ ಮಾಡಿಸಲಾಗುವುದು.| ಶಿವರಾಜಗ್ರಾಪಂ ಪಿಡಿಒ ಕಾಕಲವಾರ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net