Awareness ಹುಳಿಯಾರು ಮಾರುತಿ ನಗರ ಉಪಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಲಾವಣ್ಯಾ, ಆಶಾ ಕಾರ್ಯಕರ್ತೆಯರಾದ ಶಹತಾಜ್, ಲಕ್ಷಿ$್ಮದೇವಿ, ಮಂಜುಳಾ, ಕಾರ್ಯಕರ್ತೆಯರಾದ ಸುಮಿತ್ರಾ, ಗೀತಾ, ಮನುಬಾಯಿ ಇದ್ದರು.
ಹುಳಿಯಾರಿನ ಮಾರುತಿ ನಗರ ಉಪಕೇಂದ್ರದಲ್ಲಿ "ವಿಶ್ವ ಸ್ತನ್ಯಪಾನ
Awareness
ಸಪ್ತಾಹ'ದ ಅಂಗವಾಗಿ ಪೌಷ್ಟಿಕ ದಿನ ಹಾಗೂ ತಾಯಂದಿರಿಗೆ ಸ್ತನ್ಯಪಾನದ ಕುರಿತು ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರೋಗ್ಯ ನಿರೀಕ್ಷಾಣಾಧಿಕಾರಿ ಉಮಾಪತಿ ಮಾತನಾಡಿ, ನವಜಾತ ಶಿಶುವಿಗೆ ತಾಯಿಯ ಹಾಲೇ ಪ್ರಥಮ ಹಾಗೂ ಸಂಪೂರ್ಣ ಆಹಾರ. ಇದು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಾಂಧವ್ಯ ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದರು.
ಆರೋಗ್ಯ ಸುರಕ್ಷಾಣಾಧಿಕಾರಿ ಇಂದ್ರಮ್ಮ ಮಾತನಾಡಿ, ಬಾಣಂತಿಯರು ಆರಾಮದಾಯಕ ಭಂಗಿಯಲ್ಲಿ ಕುಳಿತು ಮಗುವಿಗೆ ಹಾಲುಣಿಸಬೇಕು. ಹಾಲು ಕುಡಿಯುವಾಗ ಮಗುವಿನ ಮೂಗು ಒತ್ತದಂತೆ ನೋಡಿಕೊಳ್ಳಬೇಕು. ಆರಂಭದಲ್ಲಿ ಎರಡು ಬೆರಳುಗಳ ನಡುವೆ ನಿಪ್ಪಲ್ ಹಿಡಿದು ಹಾಲುಣಿಸುವುದು ಸುರಕ್ಷಿತ. ಸ್ತನ್ಯಪಾನಕ್ಕೂ ಮೊದಲು ಮತ್ತು ನಂತರ ಮೊಲೆತೊಟ್ಟುಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಆರೋಗ್ಯ ಸುರಕ್ಷಾಣಾಧಿಕಾರಿ ಮಹಾಲಕ್ಷಿ$್ಮ ಮಾತನಾಡಿ, ತಾಯಂದಿರು ನಿಯಮಿತವಾಗಿ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ, ಮಹಿಳೆಯರಲ್ಲಿ ಬರುವ ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯದ ಕ್ಯಾನ್ಸರ್ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.