ಪಾತಪಾಳ್ಯ: ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು ಎಂದು ಪ್ರಭಾರ ಮುಖ್ಯಶಿಕ್ಷಕ ಎಸ್.ಆರ್.ಸುರೇಂದ್ರ ಬಾಬು ತಿಳಿಸಿದರು.
ಪಾತಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ದೇಶದಲ್ಲಿ ಗುರುಕುಲ ಪದ್ಧತಿಯಿಂದ ಗುರುಶಿಷ್ಯರ ನಡುವಿನ ಸಂಬಂಧ ಬಲಿಷ್ಠವಾಗಿದೆ. ಗುರು ಎಂದರೆ ಅಜ್ಞಾನ ಹೋಗಲಾಡಿಸಿ ಜ್ಞಾನ ನೀಡುವವರು.ಮಕ್ಕಳು ತಪು$್ಪ ಮಾಡಿದಾಗ ಸರಿದಾರಿ ತೋರಿಸುವ ಶಿಕ್ಷಕರು ದೇಶದ ಏಳಿಗೆಗೆ ಕಾರಣರಾಗುತ್ತಾರೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಸಿದ್ರಾಮಪ್ಪ ಕರಿಗೌಡ ಮಾತನಾಡಿ, ಪ್ರತಿಯೊಬ್ಬರೂ ರಾಧಾಕೃಷ್ಣನ್ ತತ್ವ, ಆದರ್ಶ ಅನುಸರಿಸಿದರೆ ಭಾರತ ಯಶಸ್ಸು ಸಾಧಿಸಬಹುದು.ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು. ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ನೈತಿಕ ಮೌಲ್ಯ ಬೆಳಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದರು.
ಶಿಕ್ಷಕ ಎಂ.ಎಸ್.ಶ್ರೀನಿವಾಸನ್, ಕೆ.ವಿ.ಶ್ರೀನಿವಾಸ್, ಅತಿಥಿ ಶಿಕ್ಷಕ ಮನೋಹರ, ಲೋಕೇಶ್, ಚೈತ್ರಾ, ಸುಜಾತಮ್ಮ ಇದ್ದರು.