ಪುಸ್ತಕ, ಸಂಸ್ಕೃತಿ ಜ್ಞಾನದ ಪ್ರತೀಕ

ಸಿಂದಗಿ ನಗರದ ನಾಗೂರ ಬಡವಾಣೆಯ ಪ್ರೇರಣಾ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ರೇಖಾ ಮೊಹರೆ, ಆರ್.ಡಿ. ಕುಲಕರ್ಣಿ, ಪಿ.ಡಿ. ಕುಲಕರ್ಣಿ, ಎಂ.ಪಿ. ಬುಕ್ಕಾ ಮತ್ತಿತರರಿದ್ದರು.
ಸಿಂದಗಿ ನಗರದ ನಾಗೂರ ಬಡವಾಣೆಯ ಪ್ರೇರಣಾ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ರೇಖಾ ಮೊಹರೆ, ಆರ್.ಡಿ. ಕುಲಕರ್ಣಿ, ಪಿ.ಡಿ. ಕುಲಕರ್ಣಿ, ಎಂ.ಪಿ. ಬುಕ್ಕಾ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೇಖಾ ಮೊಹರೆ ಅಭಿಮತ
  • ಶಾಲಾ ಸಂಸತ್ತು ಪ್ರತಿಜ್ಞಾವಿಧಿ ಸಮಾರಂಭ
ಸಿಂದಗಿ : ಪುಸ್ತಕ ಮತ್ತು ಸಂಸ್ಕೃತಿ ಜ್ಞಾನದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿವೆ ಎಂದು ವಿಶ್ರಾಂತ ಶಿಕ್ಷಕಿ ರೇಖಾ ಮೊಹರೆ ಹೇಳಿದರು.

ನಗರದ ನಾಗೂರ ಬಡಾವಣೆಯಲ್ಲಿ ಶನಿವಾರ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿಧೋದ್ದೇಶಗಳ ಸಂಸ್ಥೆ, ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಪಠ್ಯೇತರ ಮತ್ತು ಪಠ್ಯ ಪೂರಕ ಚಟುವಟಿಕೆಗಳ ಹಾಗೂ ಶಾಲಾ ಸಂಘಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕಾ ಕೋಣೆಯಲ್ಲಿಯೇ ದೇಶದ ಭವಿಷ್ಯ ಅಡಗಿದೆ ಎಂಬ ಮಾತಿನಂತೆ ಮಕ್ಕಳಿಗೆ ಆಡಳಿತ ಮತ್ತು ಹಕ್ಕುಗಳ ಪ್ರತಿಪಾದನೆಯ ಜತೆಗೆ ಭವಿಷ್ಯದ ಪ್ರಜೆಗಳನ್ನಾಗಿಸುವ ದಿಸೆಯಲ್ಲಿ ಶಾಲೆಗಳಲ್ಲಿ ಮತದಾನ, ಸಂಸತ್ತಿನ ರಚನೆ ಸೇರಿ ಮಂತ್ರಿ ಮಂಡಲದ ಖಾತೆಗಳ ಸೂಕ್ತ ನಿರ್ವಹಣೆಯ ಪ್ರಜಾಪ್ರಭುತ್ವದ ಅರಿವು ಮೂಡಿಸುವುದು. ಅವರಲ್ಲಿ ನಾಯಕತ್ವದ ಗುಣಗಳನ್ನು ಸೃಜಿಸುವುದರೊಂದಿಗೆ ಪ್ರಾಮಾಣಿಕತೆ, ನೈತಿಕತೆ ತಿಳಿಸುವುದು ಶಿಕ್ಷಕರ ಹಾಗೂ ಪಾಲಕರ ಕರ್ತವ್ಯ ಎಂದರು.

ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅವರು, ಮಕ್ಕಳಿಗೆ ಶಿಸ್ತು ಅಗತ್ಯ. ಅವರಿಗೆ ಕಲ್ಪಿತ ಮತದಾನದ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಅದರ ಆದ್ಯ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಪ್ರತಿ ಶೈಕ್ಷಣಿಕ ವರ್ಷವೂ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಸಂಘಟನಾ ಕೌಶಲ ಮತ್ತು ಸಂಘಟನಾತ್ಮಕ ಕಾರ್ಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂ.ಪಿ. ಬುಕ್ಕಾ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಂಸ್ಥೆಯ ನಿರ್ದೇಶಕ ಪಿ.ಡಿ. ಕುಲಕರ್ಣಿ, ಲೀಲಾ ನಾಯಕ, ಸಾವಿತ್ರಿ ವೀರಾಪೂರ, ಎಂ.ಜಿ. ದ್ಯಾಮಗೊಂಡ, ಎಸ್.ಡಿ. ನಾಯಕ, ಪಾಲಕರು, ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net