ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕೊಳ್ಳೇಗಾಲ ನಂಜಯ್ಯನ ಕಟ್ಟೆ ಬಡಾವಣೆಯ ಬಡ ಮಕ್ಕಳಿಗೆ ಮಂಗಳವಾರ ದಾನಿಗಳಾದ ಹರ್ಷ ಹೋಟೆಲ್ ಮಾಲೀಕ  ನಡರಾಜಪ್ಪ, ನಗರಸಭೆ ಮಾಜಿ ಸದಸ್ಯ ಶಾಂತರಾಜು ಅವರು ಪುಸ್ತಕ ವಿತರಣೆ ಮಾಡಿದರು. ಸಿದ್ದರಾಜು, ವೆಂಕಟೇಶ್, ಶಾಂತರಾಜು, ರಾಚಪ್ಪಾಜಿ, ಹೇಮಂತ್, ಅಜಯ್ ಇತರರು ಇದ್ದರು.
ಕೊಳ್ಳೇಗಾಲ ನಂಜಯ್ಯನ ಕಟ್ಟೆ ಬಡಾವಣೆಯ ಬಡ ಮಕ್ಕಳಿಗೆ ಮಂಗಳವಾರ ದಾನಿಗಳಾದ ಹರ್ಷ ಹೋಟೆಲ್ ಮಾಲೀಕ ನಡರಾಜಪ್ಪ, ನಗರಸಭೆ ಮಾಜಿ ಸದಸ್ಯ ಶಾಂತರಾಜು ಅವರು ಪುಸ್ತಕ ವಿತರಣೆ ಮಾಡಿದರು. ಸಿದ್ದರಾಜು, ವೆಂಕಟೇಶ್, ಶಾಂತರಾಜು, ರಾಚಪ್ಪಾಜಿ, ಹೇಮಂತ್, ಅಜಯ್ ಇತರರು ಇದ್ದರು.
Published on
ಕೊಳ್ಳೇಗಾಲ: ಶಿಕ್ಷಣದಿಂದ ಮಾತ್ರ ಜೀವನದ ಅಗತ್ಯತೆ ಪಡೆದುಕೊಳ್ಳಲು ಸಾಧ್ಯ. ಹಾಗಾಗಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಓದುವ ಕಡಗೆ ಒತ್ತು ನೀಡಬೇಕು ಎಂದು ಖಾಸಗಿ ಹೋಟೆಲ್ ಮಾಲೀಕ ನಟರಾಜಪ್ಪ ಸಲಹೆ ನೀಡಿದರು.
ಪಟ್ಟಣದ ನಂಜಯ್ಯನ ಕಟ್ಟೆ ಬಡಾವಣೆಯ ಬಡ ಮಕ್ಕಳಿಗೆ ಮಂಗಳವಾರ ಪುಸ್ತಕ ವಿತರಿಸಿ ಮಾತನಾಡಿದರು.
ನಗರಸಭೆ ಮಾಜಿ ಸದಸ್ಯ ಶಾಂತರಾಜು ಬಸ್ತೀಪುರ ಮಾತನಾಡಿ, ಐದು ವರ್ಷದಿಂದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುತ್ತಿದೆ. ಬಡವರಿಗೆ ಶಿಕ್ಷಣವೇ ಆಸ್ತಿಯಾಗಿದೆ. ಹಾಗಾಗಿ ಮಕ್ಕಳನ್ನು ಓದಿಸಲು, ಬೆಳೆಸಲು ತಂದೆ-ತಾಯಿ ಪ್ರತಿನಿತ್ಯ ಪಡುವ ಕಷ್ಟಗಳನ್ನು ಮಕ್ಕಳು ಅರಿತುಕೊಳ್ಳಬೇಕು. ಉತ್ತಮ ರೀತಿಯಲ್ಲಿ ಓದಿ ಉನ್ನತ ಸ್ಥಾನ ಮಾನಗಳನ್ನು ಪಡೆಯಬೇಕು. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರ ಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಹೋಟೆಲ್ ಮಾಲೀಕ ನಟರಾಜಪ್ಪ, ಖಾಸಗಿ ಸ್ಟೋರ್ ಮಾಲೀಕ ಉಮೇಶ್ ಹಾಗೂ ನಗರಸಭೆ ಮಾಜಿ ಸದಸ್ಯ ಶಾಂತರಾಜು ಬಸ್ತೀಪುರ ಅವರು 60ಕ್ಕೂ ಹೆಚ್ಚು ಮಕ್ಕಳಿಗೆ 2026-27ನೇ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ಪುಸ್ತಕ ವಿತರಣೆಗೆ ಮಾಡಿದರು.
ಮುಖಂಡರಾದ ಸಿದ್ದರಾಜು,ವೆಂಕಟೇಶ್, ಶಾಂತರಾಜು, ರಾಚಪ್ಪಾಜಿ, ಹೇಮಂತ್, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಅಜಯ್ ಹಾಗೂ ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net