ಎಲುಬು ಕಾಳಜಿ ಅವಶ್ಯಕ

ಉಚಿತ ಎಲುಬು ತಪಾಸಣೆ ಶಿಬಿರ
ಉಚಿತ ಎಲುಬು ತಪಾಸಣೆ ಶಿಬಿರ
Published on

ಪ್ರಮುಖ ಮುಖ್ಯಾಂಶಗಳು

  • ಎಲುಬು ಕಾಳಜಿ ಅವಶ್ಯಕ
  • ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಅಧಿಕಾರಿ ಸಲಹೆ
  • ಉಚಿತ ಎಲುಬು ತಪಾಸಣೆ ಶಿಬಿರ
ಎಲುಬಿನ ಕಾಳಜಿ ವಹಿಸುವುದು ಅಗತ್ಯ
|ಕಾರ್ಯನಿರ್ವಾಹಣಾಧಿಕಾರಿ ನವೀನ.ಎನ್ ಸಲಹೆ| ಉಚಿತ ಎಲುಬು ತಪಾಸಣೆ ಶಿಬಿರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ :
ಇಂದಿನ ಆಹಾರ ಪದ್ಧತಿಯಲ್ಲಿ ಬಹುತೇಕರಲ್ಲಿ ಮೂಳೆ ಸಮಸ್ಯೆ ಕಾಡುತ್ತಿದೆ.ಎಲುಬಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ ಎಂದು ಕೆಎಲ್ಐ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ.ಎನ್ ಸಲಹೆ ಸೂಚನೆ.
ನಗರದ ಕೆಎಲ್ಐ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಎಲುಬು ಕೀಲು ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ಎಲುಬಿನ ತಪಾಸಣಾ ಶಿಬಿರ ಅವರು ಉದ್ಘಾಟಿಸಿದರು.
ವಯೋ ವೃದ್ಧರಲ್ಲಿ ಎಲುಬು ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತದೆ .ಇದಕ್ಕೆ ಕಾರಣ ಸ್ತ್ರೀ ಪುರುಷರೆನ್ನದೆ ಎಲ್ಲರಲ್ಲೂ ಕ್ಯಾಲ್ಸಿಯಂ ಕ್ರಮೇಣ ಕಡಿಮೆಯಾಗುತ್ತ ಸಾಗುತ್ತಿದೆ. ಆದ್ದರಿಂದ 40 ವರ್ಷ ವಯಸ್ಸು ದಾಟಿದ ನಂತರ ಎಲ್ಲರೂ ಎಲುಬಿನ ಸಾಂದ್ರತೆ ತಪಾಸಣೆಗೆ ಒಳಪಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ ರೋಗ ಬರದಂತೆ ಮೊದಲೇ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು ತಿಳಿಸಿದರು.
ಎಲುಬು ಕೀಲು ವಿಭಾಗದ ತಜ್ಞ ಡಾ. ಸಿ.ವಿ ಶೆಟ್ಟರ, ಡಾ.ಆನಂದಕುಮಾರ ಕಟಾವಿ,ಡಾ.ಮುರಗೇಶ, ಡಾ.ಆಕಾಶ ಗುಂಡಲ್ಲಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net