ಬೊಲೆರೋ ಡಿಕ್ಕಿಯಾಗಿ ಗಾಯ

Bolero injured in collision
Bolero injured in collision
Published on
ಚಿಂತಾಮಣಿ: ನಗರದ ಹೊರವಲಯದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ಡೇರಿ ಬಳಿ ಮಂಗಳವಾರ ಸಂಜೆ ಬೊಲೆರೋ ಹಾಗೂ ಕಾರಿಗೆ ನಡುವೆ ಡಿಕ್ಕಿಯಾಗಿ, ಕಾರಿನಲ್ಲಿದ್ದ ಚಿಂತಾಮಣಿಯ ವೈದ್ಯ ಡಾ.ಅವಿನಾಶ್​ ಮತ್ತು ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಬೊಲೆರೋ, ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿದ್ದ ಕಂಬಕ್ಕೆ ಡಿಕ್ಕಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬೊಲೆರೋ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net