ನೀರಿನ ತೊಟ್ಟಿಯಲ್ಲಿ ಶವ ಪತ್ತೆ

Body found in water tank
Body found in water tank
Published on
ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿ ಕೆಂದನಹಳ್ಳಿಯ ಮನೆ ಕಾಂಪೌಂಡ್​ ಪಕ್ಕದ ನೀರಿನ ತೊಟ್ಟಿಯಲ್ಲಿ ಭಾನುವಾರ ಶವ ಪತ್ತೆಯಾಗಿದೆ.
ಗ್ರಾಮದ ಸಂತೋಷ್​(38) ಮೃತ. ಕೋಲಾರದ ತಾವರೆಕೊಪ್ಪದಲ್ಲಿ ವಾಸವಾಗಿದ್ದ, 3 ದಿನಗಳ ಹಿಂದೆ ಸ್ವಗ್ರಾಮ ಕೆಂದನಹಳ್ಳಿಗೆ ಬಂದಿದ್ದ, ನಿಮಾರ್ಣ ಹಂತದಲ್ಲಿರುವ ಮನೆ ಕಾಂಪೌಂಡ್​ ಪಕ್ಕದ ತೊಟ್ಟಿಯ ಬಳಿ ನೊಣಗಳು ಹೆಚ್ಚಾಗಿದ್ದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ನೀರಿನ ತೊಟ್ಟಿಯಲ್ಲಿ ಸಂತೋಷ್​ ಶವ ಪತ್ತೆಯಾಗಿದೆ.
ಕೈವಾರ ಹೊರಠಾಣೆ ಪೊಲೀಸರು ಶವವನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೈವಾರ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net