5 ಸ್ಕಿಲ್ ಕೋರ್ಸ್ ಪರಿಚಯಿಸಿದ ಬಿಎಂಎಸ್ ಕಾಲೇಜು

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು
Published on

ಪ್ರಮುಖ ಮುಖ್ಯಾಂಶಗಳು

  • ಕೌಶಲ ಶಿಕ್ಷಣವನ್ನು ಕಲಿಸಿಕೊಡುವ ಉದ್ದೇಶದಿಂದ ಕಾಲೇಜು ವಾರ್ಷಿಕ 3.2ಕೋಟಿ ರೂ. ವೆಚ್ಚ ಮಾಡಿ ಈ ಸ್ಕಿಲ್ ಲ್ಯಾಬ್ ಅನ್ನು ತೆರೆದಿದೆ.
  • ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಹೋಗುವ ಮುನ್ನ ಕೈಗಾರಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಐದು ಕೌಶಲವನ್ನು ಕಲಿಯಬಹುದಾಗಿದೆ.
  • ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಕಂಪನಿಗಳಿಂದ ಕೌಶಲ ಶಿಕ್ಷಣದ ಪ್ರಮಾಣ ಪತ್ರವನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸ್ಕಿಲ್ ಲ್ಯಾಬ್ ಫ್ರೇಮ್‌ವರ್ಕ್ ಅಡಿಯಲ್ಲಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಮುಖ ಐದು ಕೌಶಲಗಳನ್ನು ಪರಿಚಯಿಸಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜತೆಗೆ ಕೌಶಲ ಶಿಕ್ಷಣವನ್ನು ಕಲಿಸಿಕೊಡುವ ಉದ್ದೇಶದಿಂದ ಕಾಲೇಜು ವಾರ್ಷಿಕ 3.2ಕೋಟಿ ರೂ. ವೆಚ್ಚ ಮಾಡಿ ಈ ಸ್ಕಿಲ್ ಲ್ಯಾಬ್ ಅನ್ನು ತೆರೆದಿದೆ. ಇದರಿಂದ ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಹೋಗುವ ಮುನ್ನ ಕೈಗಾರಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಐದು ಕೌಶಲವನ್ನು ಕಲಿಯಬಹುದಾಗಿದೆ.
ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಕಂಪನಿಗಳಿಂದ ಕೌಶಲ ಶಿಕ್ಷಣದ ಪ್ರಮಾಣ ಪತ್ರವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 3,250 ವಿದ್ಯಾರ್ಥಿಗಳಿಗೆ ಇದರ ಅನುಕೂಲವಾಗಲಿದೆ. ಇದೊಂದು ಹೆಚ್ಚುವರಿ ಕೋಸ್‌ರ್ ಅಲ್ಲ, ಬದಲಾಗಿ ಇದನ್ನು ಪಠ್ಯಕ್ರಮದೊಳಗೆ ಸೇರ್ಪಡೆ ಮಾಡುತ್ತಿರುವುದರಿಂದ ಕ್ರೆಡಿಟ್ ಆಧಾರಿತ ಕೋರ್ಸ್ ಆಗಿ ಮಾರ್ಪಟ್ಟಿದೆ. ಮೊದಲ ಮೂರು ವರ್ಷದಲ್ಲಿ ಐದು ಸ್ಕಿಲ್ ಕ್ರೆಡಿಟ್ ದೊರೆಯಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಪಡೆದುಕೊಳ್ಳುವುದಕ್ಕೆ ಅನುಕೂಲವಾಗಲಿದೆ.
"

ಕೌಶಲ ಶಿಕ್ಷಣಕ್ಕಾಗಿ 12 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಎಐ, ಡೇಟಾ ಸೈನ್ಸ್, ವಿಎಲ್‌ಎಸ್‌ಐ ಡಿಸೈನ್, ಸೈಬರ್ ಭದ್ರತೆ ಹೀಗೆ ಹಲವು ವಿಷಯಗಳಲ್ಲಿ ಪರಿಣಿತಿ ಹೊಂದಿರುವ ಎಲ್ ಆೃಂಡ್ ಟಿ, ಎಜುಟೆಕ್ ಸೇರಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ.

— - ಡಾ. ಭೀಮೇಶ ಆರ್ಯ, ಬಿಎಂಎಸ್‌ಸಿಇ ಪ್ರಾಂಶುಪಾಲ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net