ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ರಕ್ತಪಾತ: ಮೂವರನ್ನು ಭೀಕರವಾಗಿ ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ! Triple Murder in banglore

Triple Murder ಸಾಂದರ್ಭಿಕ ಚಿತ್ರ
Triple Murder ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಇಡೀ ರಾಜಧಾನಿಯೇ ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. 34 ವರ್ಷದ ಪ್ರಶಾಂತ್ ಎಂಬ ವ್ಯಕ್ತಿ ತನ್ನದೇ ಕುಟುಂಬದ (Triple Murder in banglore) ಮೂವರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ, ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಗಳಮ್ಮ, ನಂಜಮ್ಮ ಹಾಗೂ ಸತೀಶ್ ಕೊಲೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತರು ಆರೋಪಿ ಪ್ರಶಾಂತ್‌ನ ತಾಯಿ, ಅಜ್ಜಿ ಮತ್ತು ಮಾವ ಎಂದು ತಿಳಿದುಬಂದಿದೆ. ಕೇವಲ 30 ವರ್ಷ ದಾಟಿದ ಯುವಕನೊಬ್ಬ ಇಷ್ಟೊಂದು ಭೀಕರ ಕೃತ್ಯ ಎಸಗಲು ಕುಟುಂಬದಲ್ಲಿ ನಡೆದ ತೀವ್ರ ಕಲಹ ಅಥವಾ ವೈಯಕ್ತಿಕ ದ್ವೇಷವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಭೀಕರತೆಯನ್ನು ನೆನೆದು ಧ್ವನಿ ಕಳೆದುಕೊಂಡ ತಂದೆ ಚಿಕ್ಕಣ್ಣ, ಒಂದು ವೇಳೆ ನಾನು ಮನೆಯಲ್ಲೇ ಉಳಿದುಕೊಂಡಿದ್ದರೆ, ಆತ ನನ್ನನ್ನೂ ಜೀವಂತವಾಗಿ ಬಿಡುತ್ತಿರಲಿಲ್ಲ. ನನ್ನನ್ನೂ ಮುಗಿಸಿಬಿಡುತ್ತಿದ್ದ. ರಾತ್ರಿ ಎಲ್ಲವೂ ಚೆನ್ನಾಗಿಯೇ ಇತ್ತು. ಮನೆಯಲ್ಲಿ ಯಾವುದೇ ಗಲಾಟೆ, ಜಗಳ ನಡೆದೇ ಇಲ್ಲ. ಆತ ಯಾಕೆ ಈ ರೀತಿ ಮಾಡಿದ, ಇಷ್ಟೊಂದು ಭೀಕರ ಕೃತ್ಯಕ್ಕೆ ಕೈಹಾಕಲು ಕಾರಣ ಏನು ಎಂಬುದು ನನಗೂ ತಿಳಿಯುತ್ತಿಲ್ಲ ಎಂದು ಆತಂಕದಿಂದ ಹೇಳಿಕೊಂಡಿದ್ದಾರೆ.

ಬಂಧನದ ಭೀತಿಗೆ ಆರೋಪಿ ಪ್ರಶಾಂತ್ ಆತ್ಮಹತ್ಯೆ!

ಹತ್ಯಾಕಾಂಡ ನಡೆಸಿ ಓಡಿಹೋಗಲು ಯತ್ನಿಸುತ್ತಿದ್ದ ಆರೋಪಿ ಪ್ರಶಾಂತ್‌ನನ್ನು ಗಮನಿಸಿದ ಮನೆ ಮಾಲೀಕ ತಕ್ಷಣ ಆತನನ್ನು ಅದೇ ಮನೆಯಲ್ಲಿ ಹಾಕಿ ಲಾಕ್ ಮಾಡಿದ್ದಾರೆ. ಪೊಲೀಸರು ಬಂದು ತಮ್ಮನ್ನು ಬಂಧಿಸುತ್ತಾರೆ ಎಂಬ ತೀವ್ರ ಭಯದಿಂದ ಹೆದರಿದ ಪ್ರಶಾಂತ್, ಕೊಠಡಿಯ ಒಳಗೇ ನೇಣಿಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಮಾಕ್ಷಿಪಾಳ್ಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡ ಪ್ರಶಾಂತ್‌ನ ಈ ವಿಲಕ್ಷಣ ಕೃತ್ಯಕ್ಕೆ ಅಸಲಿ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net