ಯುವಕರು ರಕ್ತದಾನಕ್ಕೆ ಮುಂದಾಗಬೇಕು

ಕಾರಿಮನಿ ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರ ಪ್ರಾರಂಭ
ಕಾರಿಮನಿ ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರ ಪ್ರಾರಂಭ
Published on

ಪ್ರಮುಖ ಮುಖ್ಯಾಂಶಗಳು

  • ಎನ್ ಎಸ್ ಎಸ್ ಶಿಬಿರದಲ್ಲಿ ರಕ್ತದಾನ ಶಿಬಿರ
  • ಕೆಎಲ್ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದಿಂದ ರಕ್ತದಾನ ಶಿಬಿರ
  • ಕಾರಿಮನಿ ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರ

ಯುವಕರು ರಕ್ತದಾನಕ್ಕೆ ಮುಂದಾಗಬೇಕು
| ಡೀನ್ ಡಾ.ಬಿ.ಡಿ.ಬಿರಾದಾರ ಕರೆ | ರಕ್ತದಾನ ಶಿಬಿರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರ ೭೯ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರವು ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ, ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದು ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ.ಬಿ.ಡಿ.ಬಿರಾದಾರ ಕರೆ ಮಾಡಲು.
ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಬುಧವಾರ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ನೀಡುವ ರಕ್ತ ಹಲವಾರು ಜನರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಜತಗೆ ರಕ್ತದಾನ ಮಾಡುವುದರಿಂದ ಉಪಯೋಗವಿದೆ ಎಂದು ರಕ್ತದಾನದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಠ್ಠಲ ಮಾನೆ ಮಾತನಾಡಿ ರಕ್ತದಾನ ಕುರಿತು ಸಮಾಜದಲ್ಲಿರುವ ಅನಗತ್ಯ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರಮಾಡಿ, ಅರ್ಹ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ಮಾಡಿ ಮಾಡಲಾಗಿದೆ.
ಎಸ್.ವಿ ವಿರಾಗಿ, ಡಾ.ಪ್ರವೀಣಕುಮಾರ ಎಂ.ಬಿ, ಡಾ.ಮಧುರಿಮ ವಿನೋದ, ಡಾ.ಬಾಳೇಶ ಗೌಡಪ್ಪನವರ ಇತತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net