ರಕ್ತದೊತ್ತಡದಿಂದ ಅನೇಕ ಕಾಯಿಲೆ

ರಕ್ತದೊತ್ತಡ ದಿನ ಆಚರಣೆ
ರಕ್ತದೊತ್ತಡ ದಿನ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ಕೆಎಲ್ಇ ಸಂಶೋಧನಾ ಕೇಂದ್ರದಲ್ಲಿ ಬಿಪಿ ಡೆ ಆಚರಣೆ
  • ರಕ್ತದೊತ್ತಡದಿಂದ ಹಲವಾರು ಕಾಯಿಲೆ ಬರುತ್ತವೆ
  • ಕೆಎಲ್ಇ ಆಸ್ಪತ್ರೆ ಅಧಿಕಾರಿ ಡಾ.ದಯಾನಂದ ಅಭಿಪ್ರಾಯ
ಅಧಿಕ ರಕ್ತದೊತ್ತಡದಿಂದ ಇತರ ಕಾಯಿಲೆ
| ಡಾ. ಡಾ.ಎಂ ದಯಾನಂದ ಅಭಿಪ್ರಾಯ | ವಿಶ್ವ ಅಧಿಕ ಪ್ರದರ್ಶನ ದಿನ ಆಚರಣೆ
ವಿಜಯವಾಣಿ ಸುದ್ದಿ ಬೆಳಗಾವಿ:
ಅಧಿಕ ರಕ್ತದೊತ್ತಡ ಆರೋಗ್ಯಕ್ಕೆ ಗಂಭೀರ ತೊಂದರೆಯಾಗುವ ಕಾಯಿಲೆಯಾಗಿದ್ದು,, ಇದು ಇತರ ಕಾಯಿಲೆಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿನ ಜನರು ಹೆಚ್ಚಾಗಿ ಅಧಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅಭಿಪ್ರಾಯಪಟ್ಟರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗವು ಈಚೆಗೆ ವಿಶ್ವ ಅಧಿಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಅವರು ಉದ್ಘಾಟಿಸಿದರು.
ಗ್ರಾಮೀಣ ಜನರು ಚಿಕಿತ್ಸೆ ಪಡೆಯುವಲ್ಲಿ ಹಿಂದೇಟು ಹಾಕುತ್ತಾರೆ. ಕಡಿಮೆ ಮತ್ತು ಮಧ್ಯಮ-ಆದಾಯದವರು ತಮಗೆ ಇದೆ ಎಂಬುದನ್ನೇ ಅರಿತುಕೊಂಡಿಲ್ಲ. ಯುವಕರಲ್ಲಿ ಕಂಡುಬರುತ್ತಿರುವುದು ಅತ್ಯಂತ ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಕೆಲಸದೊತ್ತಡದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಸರಿಯಾದ ಸಮಯಕ್ಕೆ ತಪಾಸಣೆಗೊಳಪಡದಿದ್ದರೆ, ತೀವ್ರತರವಾದ ಅನಾರೋಗ್ಯಕ್ಕೆ ಕಾರಣವಾಯಿತು.
ವಿಭಾಗದ ಮುಖ್ಯಸ್ಥ ಡಾ.ಸಂಜಯ ಪೋರವಾಲ ಮಾತನಾಡಿ ಅಧಿಕ ರಕ್ತದೊತ್ತಡವು ಯಾವುದೇ ಗುಣಗಳನ್ನು ಹೊಂದಿರುವುದಿಲ್ಲ. ಆದರೆ ಇದು ಹೃದಯಾಘಾತ, ಪಾರ್ಶವಾಯು, ಮೂತ್ರಪಿಂಡದ ಖಾಯಿಲೆ ಹಾಗೂ ಅಕಾಲಿಕ ಮರಣದ ಅಪಾಯವನ್ನು ಹೊಂದಿದೆ. ಶೀಘ್ರದಲ್ಲಿಯೇ ಪತ್ತೆಹಚ್ಚಿ ನಿಯಮಿತ ಚಿಕಿತ್ಸೆ ಮತ್ತು ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಹಿರಿಯ ಹೃದ್ರೋಗಜ್ಞ ವೈದ್ಯ ಡಾ.ಸುರೇಶ ಪಟ್ಟೇದ, ಡಾ.ಸಮೀರ ಅಂಬರ, ಡಾ.ವಿಜಯಾನಂದ ಮೆಟಗುಡಮಠ, ಡಾ.ಸುಹಾಸಿನಿ ಅಗರ್ಥಾ, ಡಾ.ವಿಶ್ವನಾಥ ಹೆಸರೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net