ವಿಡಿಯೋ, ಖಾಸಗಿ ಫೋಟೋ ಕಳುಹಿಸಿ ಮಾಜಿ ಕ್ಲಾಸ್​ಮೇಟ್​ನಿಂದ ಕಿರುಕುಳ; ಡೆತ್​ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ..​​Bengaluru

​​Bengaluru ​Agara Lake Vanishree suicide case
​​Bengaluru ​Agara Lake Vanishree suicide case
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಕ್ಲಾಸ್​ಮೇಟ್​ ಕಿರುಕುಳಕ್ಕೆ ಬೇಸತ್ತು ಅಗರ ಕೆರೆಗೆ ಹಾರಿ ಯುವತಿ ಆತ್ಮಹತ್ಯೆ.
  • HSR ಲೇಔಟ್​ನಲ್ಲಿ ಜ್ಯುವೆಲ್ಲರಿ ಶೋರೂಮ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ.
  • ಕುಟುಂಬದ ಗೌರವ ಕಾಪಾಡಲು ಈ ತೆಗೆದುಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖ.
ಬೆಂಗಳೂರು: ಪ್ರೀತಿ ಹೆಸರಿನಲ್ಲಿ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತಿದ್ದ  22 ವರ್ಷದ ಯುವತಿಯೊಬ್ಬರು ಅಗರ ಕೆರೆಗೆ(​​Bengaluru ​Agara Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ  ಬೆಂಗಳೂರಿನ ಎಚ್​​ಎಸ್​​ಆರ್​ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು 22 ವರ್ಷದ ವಾಣಿಶ್ರೀ ಎಂದು ಗುರುತಿಸಲಾಗಿದೆ. ವಾಣಿ ಶ್ರೀ  ಒಂದು ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹರಿಸಿ ಬಂದಿದ್ದರು. ಪ್ರತಿಷ್ಠಿತ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಪಿಜಿಯಲ್ಲಿ ಕಳೆದ ಆರು ತಿಂಗಳಿಂದ ವಾಸವಾಗಿದ್ದಳು. ಶನಿವಾರದಂದು ಅಗರ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು ಎನ್ನಲಾಗಿದೆ.

ವಾಣಿ ಶ್ರೀ ಡೆತ್​ ನೋಟ್ ಪತ್ತೆ

ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ ತನ್ನ ಸಾವಿಗೆ ಮಾಜಿ ಕ್ಲಾಸ್​ ಮೇಸ್​​ ಅಭಿಷೇಕ್​ ಎಎಸ್ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಭಿಷೇಕ್​ ನನ್ನ ಸಾವಿಗೆ ನೇರ ಕಾರಣ. ಆತ ನನಗೆ ನಿರಂತರವಾಗಿ ವೀಡಿಯೊಗಳು ಮತ್ತು ಫೋಟೋಗಳನ್ನು ಕಳುಹಿಸುತ್ತಾ, ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ರೂಮಿಗೆ ಬಾ ಎಂದು ಬೆದರಿಕೆ ಹಾಕುತ್ತಿದ್ದಾನೆ. ನನ್ನ ಕುಟುಂಬದ ಗೌರವಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ವಾಣಿಶ್ರೀ ಸಹೋದರಿ ಎಚ್‌ಎಸ್‌ಆರ್ ಲೇಔಟ್ ಪೊಲೀಸ್​ ಠಾಣೆಯಲ್ಲಿ  ನೀಡಿದ ದೂರಿನ ಆಧಾರದ ಮೇಲೆ ಅಭಿಷೇಕ್​ ಎಂಬಾತನ ಮೇಲೆ ಬಿಎನ್‌ಎಸ್ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net